ಪಂಜಾಬ್: ಮೊಹಾಲಿ ಮುನ್ಸಿಪಲ್ ಕಾರ್ಪೊರೇಷನ್‍ ಕಾಂಗ್ರೆಸ್ ತೆಕ್ಕೆಗೆ

0
374

ಸನ್ಮಾರ್ಗ ವಾರ್ತೆ

ಚಂಡಿಗಡ,ಫೆ.19: ಪಂಜಾಬಿನ ಮೊಹಾಲಿ ಮುನ್ಸಿಪಲ್ ಕಾರ್ಪೊರೇಷನ್‍ನಲ್ಲಿಯೂ ಕಾಂಗ್ರೆಸ್ ಜಯಗಳಿಸಿದ್ದು ಒಟ್ಟು50 ವಾರ್ಡ್‍ಗಳಲ್ಲಿ 37 ಸೀಟುಗಳನ್ನು ಕಾಂಗ್ರೆಸ್ ಗೆದ್ದುಕೊಂಡಿದ್ದರೆ, ಪಕ್ಷೇತರರು 13 ಕಡೆ ಜಯಗಳಿಸಿದ್ದಾರೆ. ಚುನಾವಣಾ ಬೂತ್‍ಗಳಲ್ಲಿ ಅಕ್ರಮ ನಡೆದಿದೆ ಎಂದು ಆರೋಪ ಎದ್ದದ್ದರಿಂದ ಮೊಹಾಲಿಯಲ್ಲಿ ಮರು ಮತ ಎಣಿಕೆಗೆ ಚುನಾವಣಾ ಆಯೋಗ ಸೂಚಿಸಿತ್ತು. ಇದರ ನಂತರ ಮೊಹಾಲಿಯ ಫಲಿತಾಂಶ ಗುರುವಾರ ಘೋಷಿಸಲಾಯಿತು. ಇದರೊಂದಿಗೆ ಎಂಟು ಪುರಸಭೆಗಳಲ್ಲಿ ಕಾಂಗ್ರೆಸ್ ಆಳ್ವಿಕೆ ಬಂದಂತಾಗಿದೆ.

ಯಾರಿಗೂ ಸ್ಪಷ್ಟ ಬಹುಮತ ಇಲ್ಲದ ಮೊಗ ಮುನ್ಸಿಪಲ್ ಕಾರ್ಪೊರೇಶನ್‍ನಲ್ಲಿ ಅತ್ಯಂತ ದೊಡ್ಡ ಪಾರ್ಟಿ ಆಗಿ ಕಾಂಗ್ರೆಸ್ ಹೊರಹೊಮ್ಮಿದೆ. 109 ನರಸಭೆಗಳಲ್ಲಿ ಹೆಚ್ಚಿನ ಭಾಗ ಕಾಂಗ್ರೆಸ್ ಪಾಲಾಗಿದೆ. ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿರೋಮಣಿ ಅಕಾಲಿದಳ ತೀರ ಹಿನ್ನಡೆ ಅನುಭವಿಸಿದೆ.