ಇಂಡೋನೇಷ್ಯಾದಿಂದ ಗಾಝದಲ್ಲಿ 100 ಮಸೀದಿಗಳ ನಿರ್ಮಾಣ

0
657

ಸನ್ಮಾರ್ಗ ವಾರ್ತೆ

ಗಾಝಾದಲ್ಲಿ ನೂರರಷ್ಟು ಮಸೀದಿಯನ್ನು ನಿರ್ಮಿಸುವುದಾಗಿ ಇಂಡೋನೇಷಿಯಾ ಘೋಷಿಸಿದೆ. ರಮಝಾನ್ ಹತ್ತಿರ ಬಂದಿರುವ ಈ ಸಮಯದಲ್ಲಿ ಗಾಝಾದ ಮಂದಿಯ ಅಗತ್ಯವನ್ನು ಪರಿಗಣಿಸಿ, ಈ ನಿರ್ಧಾರ ಕೈಗೊಂಡಿರುವುದಾಗಿ ಇಂಡೋನೇಷ್ಯಾ ಹೇಳಿದೆ.

ಕಳೆದ ಒಂದೂವರೆ ವರ್ಷಗಳಲ್ಲಿ ಗಾಝದಲ್ಲಿ ಸಾವಿರಕ್ಕಿಂತಲೂ ಅಧಿಕ ಮಸೀದಿಯನ್ನು ಇಸ್ರೇಲ್ ನಾಶಪಡಿಸಿದೆ ಎಂದು ಹೇಳಿರುವ ಇಂಡೋನೇಷ್ಯಾ, ತಕ್ಷಣಕ್ಕೆ ಹತ್ತು ಮಸೀದಿಯನ್ನು ನಿರ್ಮಿಸಿಕೊಡಲಾಗುವುದು ಎಂದು ಹೇಳಿದೆ.

ಈ ಕುರಿತಂತೆ ಗಾಝಾದ ಪ್ರಮುಖರಲ್ಲಿ ಮಾತಾಡಲಾಗಿದೆ ಮತ್ತು ಮಸೀದಿ ನಿರ್ಮಾಣದ ಆರಂಭ ಹೇಗೆ ಮತ್ತು ಯಾವಾಗ ಎಂಬ ಬಗ್ಗೆ ಅಭಿಪ್ರಾಯಕ್ಕೆ ಬರಲಾಗಿದೆ ಎಂದು ಇಂಡೋನೇಷ್ಯಾ ಹೇಳಿದೆ. ಮಸೀದಿ ನಿರ್ಮಾಣಕ್ಕೆ ಇಂಡೋನೇಷ್ಯಾದ ನಾಗರಿಕರು ಕೊಡುಗೆಯನ್ನು ನೀಡಲಿದ್ದಾರೆ ಎಂದು ಕೂಡ ಇಂಡೋನೇಷ್ಯಾ ಹೇಳಿದೆ.