ಕೊರೊನಾ ಪೀಡಿತರು, 1,98,000: ಇವರಲ್ಲಿ 82,763 ಮಂದಿ ರೋಗ ಮುಕ್ತ

0
519

ಸನ್ಮಾರ್ಗ ವಾರ್ತೆ

ಬೀಜಿಂಗ್, ಮಾ. 18: ವಿಶ್ವದಾದ್ಯಂತ ಕೊರೊನಾ ದಾಂಧಲೆ ತೀವ್ರಗೊಂಡಿದ್ದು 1,98,602 ಮಂದಿಗೆ ವೈರಸ್ ತಗಲಿದ್ದು ಇವರಲ್ಲಿ 82,779 ಮಂದಿ ಗುಣಮುಖರಾಗಿದ್ದಾರೆ. 7,988 ಮಂದಿ ವೈರಸ್‍ನಿಂದ ಮೃತಪಟ್ಟಿದ್ದಾರೆ. ಕೊರೊನಾ ವೈರಸ್ ಮೊದಲು ಚೀನದಲ್ಲಿ ಕಂಡು ಬಂದಿತ್ತು. ಚೀನದಲ್ಲಿ ಹೊಸದಾಗಿ ಹನ್ನೊಂದು ಮಂದಿ ಮೃತಪಟ್ಟಿದ್ದಾರೆ. ಹೊಸದಾಗಿ 13 ಪ್ರಕರಣಗಳು ಕಂಡು ಬಂದಿವೆ. 80,894 ಮಂದಿ ವೈರಸ್ ಪೀಡಿತರು ಈಗ ಇಲ್ಲಿದ್ದಾರೆ. 3237 ಮಂದಿ ಇಲ್ಲಿ ಮೃತಪಟ್ಟಿದ್ದಾರೆ. 69,614 ಮಂದಿ ರೋಗ ಮುಕ್ತರಾಗಿದ್ದಾರೆ.

ಇಟಲಿಯಲ್ಲಿ 2503 ಮಂದಿ ಮೃತಪಟ್ಟಿದ್ದಾರೆ. ಇಲ್ಲಿ 31,506 ಮಂದಿಗೆ ಕೊರೊನಾ ಇದೆ. ಯುರೋಪಿನಲ್ಲಿ ಅತೀ ಹೆಚ್ಚು ಕೊರೊನಾದಿಂದ ಇಟಲಿ ಬಳಲುತ್ತಿದೆ. ಇರಾನಿನಲ್ಲಿ 16,169 ಮಂದಿಗೆ ಕೊರೊನಾ ದೃಢಗೊಂಡಿದೆ. 988 ಮಂದಿ ಮೃತಪಟ್ಟಿದ್ದಾರೆ. ಸ್ಪೈನ್‍ನಲ್ಲಿ 11, 826 ಮಂದಿಗೆ ಕೊರೊನಾ ಇದೆ. ಇಲ್ಲಿ 533 ಮಂದಿ ಮೃತಪಟ್ಟಿದ್ದಾರೆ. ಹೊಸದಾಗಿ ನಾಲ್ಕು ಮಂದಿಗೆ ಕೊರೊನಾ ದೃಢಪಟ್ಟಿದ್ದು ಭಾರತದಲ್ಲಿ ಕೊರೊನಾ ಪೀಡಿತರ ಸಂಖ್ಯೆ 148ಕ್ಕೇರಿಕೆಯಾಗಿದೆ. ದಿಲ್ಲಿ ಕರ್ನಾಟಕ ಮಹಾರಾಷ್ಟ್ರದಲ್ಲಿ ಕೊರೊನಾಕ್ಕೆ ಒಬ್ಬೊಬ್ಬರಂತೆ ಮೂವರು ಮೃತಪಟ್ಟಿದ್ದಾರೆ.