ಭಾರತದಲ್ಲಿ 21,000 ಕೊರೊನಾ ಪೀಡಿತರು: 681 ಮಂದಿ ಸಾವು

0
501

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ ಎ. 23: ದೇಶದಲ್ಲಿ ಕೊರೊನಾ ವೈರಸ್ ಪೀಡಿತರ ಸಂಖ್ಯೆ 21,393 ಆಗಿದೆ. ಕೊರನಾ ಪೀಡಿತರಾಗಿ ಮೃತಪಟ್ಟವರ ಸಂಖ್ಯೆ 681 ಕ್ಕೆ ಏರಿದೆ. ಈಗ 16,454 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 4257 ಮಂದಿ ರೋಗದಿಂದ ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಅತ್ಯಂತ ಹೆಚ್ಚು ಮಹಾರಾಷ್ಟ್ರದಿಂದ ಕೊರನಾ ಪ್ರಕರಣ ವರದಿಯಾಗಿದ್ದು ಇಲ್ಲಿ 5652 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊರನಾದಿಂದ ಇಲ್ಲಿ 269 ಮಂದಿ ಮೃತಪಟ್ಟಿದ್ದಾರೆ. ಗುಜರಾತಿನಲ್ಲಿ 2, 407, ಹೊಸದಿಲ್ಲಿಯಲ್ಲಿ 2,248, ರಾಜಸ್ಥಾನದಲ್ಲಿ 1,935, ಮಧ್ಯಪ್ರದೇಶದಲ್ಲಿ 1,592, ತಮಿಳ್ನಾಡಿನಲ್ಲಿ 1,629, ಉತ್ತರಪ್ರದೇಶದಲ್ಲಿ 1,449 ಕೊರೊನಾ ಪ್ರಕರಣಗಳು ವರದಿಯಾಗಿವೆ. ತೆಲಂಗಾಣದಲ್ಲಿ 949 ಮಂದಿ ಕೊರೊನಾ ಪೀಡಿತರಿದ್ದಾರೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.