ಅತಿ ಹೆಚ್ಚು ಸೋಂಕಿತ ದೇಶಗಳ ಪಟ್ಟಿಯಲ್ಲಿ ಭಾರತ 9 ರಿಂದ 7 ನೇ ಸ್ಥಾನಕ್ಕೆ; ಎರಡು ದಿನಗಳಿಂದ ಪ್ರತಿದಿನ 8 ಸಾವಿರಕ್ಕೂ ಹೆಚ್ಚು ಪ್ರಕರಣಗಳು!

0
519

ಸನ್ಮಾರ್ಗ ವಾರ್ತೆ

ನವ ದೆಹಲಿ,ಜೂ.1: ಭಾರತದಲ್ಲಿ ಭಾನುವಾರ ಸೋಂಕಿತರ ಸಂಖ್ಯೆ 1.90 ಲಕ್ಷಕ್ಕೆ ಏರಿಕೆಯಾಗಿದೆ. ಇದರೊಂದಿಗೆ ಇದು ಜರ್ಮನಿಯ 1.83 ಲಕ್ಷ ಪ್ರಕರಣಗಳನ್ನು ಮತ್ತು ಫ್ರಾನ್ಸ್‌ನ 1.88 ಲಕ್ಷ ಪ್ರಕರಣಗಳನ್ನು ಹಿಂದಿಕ್ಕಿದ್ದು, ವಿಶ್ವದ ಅತಿ ಹೆಚ್ಚು ಸೋಂಕಿತ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಈಗ 9 ರಿಂದ 7 ನೇ ಸ್ಥಾನಕ್ಕೆರಿದೆ.

ಭಾನುವಾರದವರೆಗೆ ದೇಶದಲ್ಲಿ ಒಟ್ಟು ಒಂದು ಲಕ್ಷ 90 ಸಾವಿರ 603 ಪ್ರಕರಣಗಳು ವರದಿಯಾಗಿವೆ. ಕಳೆದ ಎರಡು ದಿನಗಳಿಂದ ಪ್ರತಿದಿನ 8 ಸಾವಿರಕ್ಕೂ ಹೆಚ್ಚು ಸೋಂಕುಗಳು ವರದಿಯಾಗುತ್ತಿವೆ.

ಹೆಚ್ಚು ಸೋಂಕಿತರ ಪಟ್ಟಿಯಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದೆ. ಇಲ್ಲಿ 18 ಲಕ್ಷಕ್ಕೂ ಹೆಚ್ಚು ಪ್ರಕರಣಗಳಿವೆ. ಬ್ರೆಜಿಲ್ ಐದು ಲಕ್ಷಕ್ಕಿಂತ ಹೆಚ್ಚು ಪ್ರಕರಣಗಳನ್ನು ಹೊಂದಿದೆ. ರಷ್ಯಾದಲ್ಲಿ ಸಾಂಕ್ರಾಮಿಕತೆಯ ಪರಿಣಾಮವು ಉಳಿದ ದೇಶಗಳಿಗಿಂತ ಸ್ವಲ್ಪ ತಡವಾಗಿ ಪ್ರಾರಂಭವಾಗಿತ್ತಾದರೂ ಈಗ ಅದು ಮೂರನೇ ಸ್ಥಾನದಲ್ಲಿದೆ.

 

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.