ದೇಶದಲ್ಲಿ 82 ಸಾವಿರ ಕೊರೋನಾ ಸೋಂಕಿತರು: 24 ಗಂಟೆಗಳಲ್ಲಿ ಹೊಸದಾಗಿ 3967 ಮಂದಿಗೆ ಸೋಂಕು

0
372

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಮೇ‌.15: ಭಾರತದಲ್ಲಿ ಕೊರೋನಾ ಪೀಡಿತರ ಸಂಖ್ಯೆ 81,97ಕ್ಕೇರಿಕೆಯಾಗಿದ್ದು ಕಳೆದ 24 ಗಂಟೆಗಳಲ್ಲಿ ಹೊಸದಾಗಿ 3967 ಮಂದಿಗೆ ರೋಗ ದೃಢಪಟ್ಟಿದೆ. 100 ಮಂದಿ ಮೃತಪಟ್ಟಿದ್ದಾರೆ ಇದರೊಂದಿಗೆ ಭಾರತದಲ್ಲಿ ಕೊರೋನಾಕ್ಕೆ ಬಲಿವಾದವರ ಸಂಖ್ಯೆ 2649ಕ್ಕೇರಿಯಾಗಿದೆ.
51,401 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 27,920 ಮಂದಿ ರೋಗದಿಂದ ಗುಣಮುಖರಾಗಿದ್ದಾರೆ.

ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಕೊರೋನಾ ರೋಗಿಗಳಿದ್ದು, 24 ಗಂಟೆಗಳಲ್ಲಿ ಇಲ್ಲಿ 1602 ಮಂದಿಗೆ ರೋಗ ದೃಢವಾಗಿದೆ. ಒಟ್ಟು ಪ್ರಕರಣಗಳ ಸಂಖ್ಯೆ 27,524 ಆಗಿದೆ. 24 ಗಂಟೆಯೊಳಗೆ 44 ಮಂದಿ ಮೃತಪಟ್ಟಿದ್ದಾರೆ.

ಕೊರೋನಾ ರೋಗಿಗಳ ಸಂಖ್ಯೆಯಲ್ಲಿ ಗುಜರಾತಿಗಿಂತಲೂ ತಮಿಳ್ನಾಡಿನಲ್ಲಿ ಹೆಚ್ಚಾಗಿದ್ದು ಒಟ್ಟು 9647 ಮಂದಿ ರೋಗಪೀಡಿತರಾಗಿದ್ದಾರೆ. ಗುಜರಾತಿನಲ್ಲಿ 9591 ಮಂದಿ ರೋಗ ಪೀಡಿತರಿದ್ದಾರೆ. ದಿಲ್ಲಿಯಲ್ಲಿ 8470 ಮಂದಿಗೆ ಕೊರೋನಾ ದೃಢಪಟ್ಟಿದೆ. 24 ಗಂಟೆಯೊಳಗೆ 14 ರಾಜ್ಯಗಳಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೊರೋನಾ ಪ್ರಕರಣ ಕಂಡು ಬಂದಿಲ್ಲ. ಅಂಡಮಾನ್ ನಿಕೋಬಾರ್ ದೀಪಗಳಲ್ಲಿ , ಅರುಣಚಲ ಪ್ರದೇಶ, ಆಂಧ್ರ ಪ್ರದೇಶ, ಛತ್ತೀಸ್‍ಗಡ, ದಾದ್ರ, ನಗರ್ ಹವೇಲಿ, ಗೋವಾ, ಛತ್ತಿಸ್ ಗಡ , ಗುಜರಾತ್, ಝಾರ್ಕಂಡ್, ಮಣಿಪುರ, ಮೇಘಾಲಯ, ಮಿಝೋರಂ , ಪುದುಚ್ಚೇರಿ, ತೆಲಂಗಾಣ, ದಾಮನ್ ಆಂಡ್ ದಿಯು, ಸಿಕ್ಕಿಂ, ನಾಗಲೆಂಡ್, ಲಕ್ಷದ್ವೀಪಗಳಲ್ಲಿ ಕಳೆದ ದಿವಸ ಹೊಸ ಕೊರೋನಾ ಪ್ರಕರಣಗಳು ವರದಿಯಾಗಿಲ್ಲ.