ಮುಂಬೈ, ಜು.30: ಮುಂಬೈ ಐಐಟಿಯ ಕ್ಲಾಸಿಗೆ ಅನಿರೀಕ್ಷಿತವಾಗಿ ಬಂದ ಅತಿಥಿಯನ್ನು ನೋಡಿ ಅಧ್ಯಾಪಕರು, ಮತ್ತು ವಿದ್ಯಾರ್ಥಿಗಳು ಕೆಲಕಾಲ ಅವಾಕ್ಕಾದರು. ಅಲೆಮಾರಿ ದನವೊಂದು ತರಗತಿಗೆ ನುಗ್ಗಿತ್ತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಅಧ್ಯಾಪಕರ ಪಾಠವನ್ನು ಕೇಳಿಸಿಕೊಳ್ಳುತ್ತಿದ್ದರು. ವಿದ್ಯಾರ್ಥಿಗಳು ದನವನ್ನು ಹೊರಗೆ ಅಟ್ಟಲು ಪ್ರಯತ್ನಿಸಿದರೂ ಇಡೀ ಕ್ಲಾಸಿಗೆ ಪ್ರದಕ್ಷಿಣೆ ಬರದೆ ದನ ಹೊರಟು ಹೋಗಿಲ್ಲ.
ಯಾವ ಕ್ಲಾಸಿನಲ್ಲಿ ಯಾವಾಗ ಘಟನೆ ನಡೆಯಿತೆನ್ನುವುದು ಸ್ಪಷ್ಟವಾಗಿ ಗೊತ್ತಾಗಿಲ್ಲ ಎಂದು ಐಐಟಿ ಅಧಿಕಾರಿಗಳು ತಿಳಿಸಿದರು. ಕಳೆದವಾರ ಕ್ಯಾಂಪಸ್ಸಿನಲ್ಲಿ ವಿದ್ಯಾರ್ಥಿಯೊಬ್ಬನಿಗೆ ಹೋರಿ ಹಾಯ್ದು ಜಖಂಗೊಳಿಸಿತ್ತು.
Cow entering IIT BOMBAY without clearing JEE Advanced?? 🐄🐄🐄. A cow entering an IIT Bombay classroom 😂 pic.twitter.com/i7taJ2TPOd
— Mayur Borkar (@imayurborkar) July 29, 2019