ಸನ್ಮಾರ್ಗ ವಾರ್ತೆ
ಕೋಝಿಕ್ಕೋಡ್: ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಮಾಧ್ಯಮಗಳ ಜೊತೆ ಸೇರಿ ಛಾಯಾ ಸಮರ ನಡೆಸುತ್ತಿದ್ದಾರೆ ಎಂದು ಸಿಪಿಐ ಮುಖವಾಣಿ ಜನಯುಗಂ ಆರೋಪಿಸಿದೆ. ಸರಕಾರ ವಿರೋಧಿ ಮಾಧ್ಯಮಗಳ ಅಜೆಂಡಾಕ್ಕೆ ತಕ್ಕಂತೆ ರಾಜ್ಯಪಾಲರು ವರ್ತಿಸುತ್ತಿದ್ದಾರೆ. ಅವರಿಗಿಲ್ಲದ ಅಧಿಕಾರವನ್ನು ಪ್ರಸ್ತಾಪಿಸಿ ಶಿಕ್ಷಣ ಸಂಸ್ಥೆಗಳ ದೈನಂದಿನ ನಿರ್ವಹಣೆಯಲ್ಲಿ ಅಡಚಣೆಯುಂಟು ಮಾಡುತ್ತಿದ್ದಾರೆ ಎಂದು ತನ್ನ ಸಂಪಾದಕೀಯದಲ್ಲಿ ಸಿಪಿಎಂ ಮುಖವಾಣಿ ಟೀಕಿಸಿದೆ.
ಅವರದ್ದು ಛಾಯಾ ಸಮರ. ಆಡಳಿತ ವ್ಯವಸ್ಥೆಗಳಿಗೆ ಸವಾಲಾಗುತ್ತಿದ್ದಾರೆ. ಇಲ್ಲದ ಅಧಿಕಾರವನ್ನು ಹೇಳುತ್ತಿದ್ದಾರೆ. ಕೇಂದ್ರದ ಇಂಗಿತದಂತೆ ವರ್ತಿಸುತ್ತಿದ್ದು ರಿಸರ್ಚ್ ಕಮಿಟಿ ರೂಪಿಸಿದ್ದು ಇದಕ್ಕೆ. ತಾನು ಕುಲಪತಿಯಾಗಿರುವ ಶಿಕ್ಷಣ ಸಂಸ್ಥೆಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪಮಾನಿಸುತ್ತಾರೆ. ರಾಜ್ಯಪಾಲರ ಸ್ಥಾನಕ್ಕೆ ತಕ್ಕಂತೆ ಅವರು ವರ್ತಿಸುತ್ತಿಲ್ಲ ಎಂದು ಸಂಪಾದಕೀಯದಲ್ಲಿ ಆರೋಪಿಸಿದೆ. ಕೇರಳದ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಯತ್ನ ರಾಜ್ಯಪಾಲರದ್ದೆಂಬ ಆರೋಪ ಆರಿಫ್ ಮುಹಮ್ಮದ್ ಖಾನ್ ವಿರುದ್ಧ ಹಿಂದೆಯೂ ಕೇಳಿ ಬಂದಿತ್ತು.












