ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಮಾ. 19: ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಕಚ್ಚಾತೈಲದ ಬೆಲೆ ಭಾರೀ ಕುಸಿತ ಕಂಡಿದ್ದು, ಬ್ಯಾರಲ್ಗೆ 26 ಡಾಲರ್ ಗೆ ತಲುಪಿದೆ. ಒಂದು ಕಾಲದಲ್ಲಿ ಅಂದರೆ 2008ರಲ್ಲಿ ಬ್ಯಾರಲ್ ಒಂದಕ್ಕೆ 148 ಡಾಲರ್ ವರೆಗೆ ಬೆಲೆಯಿತ್ತು. ಇಂದು ಕ್ರೂಡ್ ಆಯಿಲ್ನ ಬೇಡಿಕೆಯೇ ಇಳಿದಿದೆ. ಜಾಗತಿಕ ಮಾರುಕಟ್ಟೆ ಆರ್ಥಿಕ ಬಿಕ್ಕಟ್ಟಿನಿಂದ ಜೋಲಿ ಹೊಡೆಯುತ್ತಿದೆ. ತೈಲರಾಷ್ಟ್ರಗಳಿಗೆ ತೈಲದರ ಇಳಿಕೆಯನ್ನು ಮಾಡುವುದು ಅನಿವಾರ್ಯವಾಗಿದೆ.
2003ರ ಬಳಿಕ ಇದೇ ಮೊದಲ ಬಾರಿ ಕಚ್ಚಾ ತೈಲ ದರ ಇಷ್ಟು ಕಡಿಮೆಯಾಗಿದೆ. ರೇಟಿಂಗ್ ಏಜೆನ್ಸಿ ಗೊಲಮಾನ್ ಡಾಚಾಸ್ ಕ್ರೂಡ್ ಆಯಿಲ್ ಬೆಲೆ ಇನ್ನೂ ಇಳಿಕೆಯಾಗಲಿದ್ದು, 20 ಡಾಲರ್ ಗೆ ತಲುಪಬಹುದೆಂದು ಭವಿಷ್ಯ ನುಡಿದಿದೆ. ಕೊರೊನಾ ದಾಂಧಲೆಯಿಂದ ಜನಜೀವನ ಸ್ತಬ್ಧವಾದಂತಾಗಿದೆ.
ಇದೇವೇಳೆ ಕಚ್ಚಾ ತೈಲದ ಲಾಭವನ್ನು ಭಾರತೀಯರಿಗೆ ನೀಡಲಾಗಿಲ್ಲ. ಒಂದು ವೇಳೆ ತೈಲದ ಬೇಡಿಕೆ ಕಡಿಮೆಯಾದರೆ ಇಲ್ಲಿಯೂ ದರ ಕಡಿಮೆ ಮಾಡುವುದು ತೈಲ ಕಂಪೆನಿಗಳಿಗೆ ಅನಿವಾರ್ಯವಾಗಲಿದೆ.












