ಮಡಿಕೇರಿ ದಸರಾ ಜನೋತ್ಸವದಲ್ಲಿ ದಫ್ ಕುಣಿತ

0
77

ಸನ್ಮಾರ್ಗ ವಾರ್ತೆ

ಮಡಿಕೇರಿ ನಗರ ದಸರಾ ಸಮಿತಿ ಮತ್ತು ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿಯ ಆಶ್ರಯದಲ್ಲಿ, ಕರ್ನಾಟಕ ಜಾನಪದ ಪರಿಷತ್, ಕೊಡಗು ಜಿಲ್ಲಾ ಘಟಕದ ವತಿಯಿಂದ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಕರ್ನಾಟಕ ಅರೆ ಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಹಾಗೂ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಸಹಯೋಗದೊಂದಿಗೆ ಇಂದು (ಅ.10) ಮಡಿಕೇರಿಯ ಗಾಂಧಿ ಮೈದಾನದಲ್ಲಿ ನಡೆದ ಅದ್ದೂರಿ ಮಡಿಕೇರಿ ಜಾನಪದ ದಸರಾ ಜನೋತ್ಸವದ ವೇದಿಕೆಯಲ್ಲಿ ದಫ್ ಕುಣಿತ ಜರುಗಿತು.

ದಫ್ ಭಾರತದ ಕೇರಳದ ಮಲಬಾ‌ರ್ ಪ್ರದೇಶದಲ್ಲಿ ಹೆಚ್ಚಾಗಿ ಕಾಣ ಸಿಗುವ ಸಾಂಪ್ರದಾಯಿಕ ಜಾನಪದ ನೃತ್ಯ ರೂಪವಾಗಿದೆ. ಅರೇಬಿಯಾದಲ್ಲಿ ಪ್ರವಾದಿ ಮುಹಮ್ಮದ್‌(ಸ) ರವರ ಕಾಲದಲ್ಲಿ ಇದನ್ನು ಉಪಯೋಗಿಸಲಾಗುತ್ತಿತ್ತು. ಇದನ್ನು ಇಸ್ಲಾಮಿಕ್ ಹಬ್ಬಗಳಲ್ಲಿ ವಿಶೇಷವಾಗಿ ಪ್ರದರ್ಶಿಸಲಾಗುತ್ತದೆ. ನೃತ್ಯ ಪ್ರಕಾರವು ತಂಡವನ್ನು ಒಳಗೊಂಡಿರುತ್ತದೆ, ಸಾಮಾನ್ಯವಾಗಿ ಪುರುಷರು, ಅವರು ‘ದಫ್’ ಬಾರಿಸುತ್ತಾ ಸಾಂಪ್ರದಾಯಿಕ ಹಾಡುಗಳನ್ನು ಹಾಡುತ್ತಾರೆ.

ವರ್ಣರಂಜಿತ ವೇಷಭೂಷಣಗಳನ್ನು ಧರಿಸುತ್ತಾರೆ ಮತ್ತು ಸಂಕೀರ್ಣವಾದ ಚಲನೆಗಳನ್ನು ಪ್ರದರ್ಶನ ಮಾಡುತ್ತಾರೆ. ಇದು ಇಸ್ಲಾಮಿಕ್ ಧಾರ್ಮಿಕ ಪದ್ಯಗಳ ಗಾಯನ ಮತ್ತು ಪಠಣದೊಂದಿಗೆ ಇರುತ್ತದೆ.