ಇಂದು ‘ಅಂತಾರಾಷ್ಟ್ರೀಯ ಮಾನವ ಐಕ್ಯತಾ ದಿನ’: ಜಿಐಓ ವತಿಯಿಂದ ಮಂಗಳೂರು ಪುರಭವನದಲ್ಲಿ ಸಾರ್ವಜನಿಕ ಕಾರ್ಯಕ್ರಮ

0
403

ಸನ್ಮಾರ್ಗ ವಾರ್ತೆ

ಮಂಗಳೂರು: ಅಂತಾರಾಷ್ಟ್ರೀಯ ಮಾನವ ಐಕ್ಯತಾ ದಿನದ ಪ್ರಯುಕ್ತ ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಶನ್ (ಜಿಐಓ) ವತಿಯಿಂದ “ವೈವಿಧ್ಯಮಯ ಭಾರತವನ್ನು ಉಳಿಸಿಕೊಳ್ಳೋಣ”(KIND) ಎಂಬ ಧ್ಯೇಯ ವಾಕ್ಯದಡಿಯಲ್ಲಿ ಸಾರ್ವಜನಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದರ ಅಂಗವಾಗಿ ಇಂದು ಮಂಗಳವಾರ(ಡಿ.20) ಸಂಜೆ 4:30ಕ್ಕೆ ನಗರದ ಟೌನ್‌ಹಾಲ್‌ನಲ್ಲಿ ಸಾರ್ವಜನಿಕ ಕಾರ್ಯಕ್ರಮ ನಡೆಯಲಿದೆ.

ಮುಖ್ಯ ಅತಿಥಿಗಳಾಗಿ ಪಿ.ಎ ಫಸ್ಟ್ ಗ್ರೇಡ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಸರ್ಫರಾಝ್ ಹಾಸಿಮ್, ಮುಲ್ಕಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಾಸುದೇವ್ ಬೆಳ್ಳೆ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯೆ ವಿಜಯಲಕ್ಷ್ಮಿ, ಜಿಐಓ ಕರ್ನಾಟಕ ರಾಜ್ಯಾಧ್ಯಕ್ಷೆ ಆಯಿಶಾ ತಬಸ್ಸುಮ್, ಸಾಮಾಜಿಕ ಕಾರ್ಯಕರ್ತೆ ಹಾಗೂ ಲೇಖಕಿ ಸಿಹಾನ ಭಾಗವಹಿಸಲಿದ್ದಾರೆ.