ಪತ್ರಕರ್ತ ಸುಧೀರ್ ಚೌಧರಿ ವಿರುದ್ಧ ವಿದ್ಯಾರ್ಥಿಯಿಂದ ಮಾನನಷ್ಟ ಮೊಕದ್ದಮೆ

0
241

ಸನ್ಮಾರ್ಗ ವಾರ್ತೆ

ಜುಲೈ 27ರಂದು ವಿದ್ಯಾರ್ಥಿ ಪ್ರತಿಭಟನೆಯ ಸಮಯದಲ್ಲಿ ಡಿ ಡಿ ನ್ಯೂಸ್ ನಲ್ಲಿ ಪತ್ರಕರ್ತ ಸುಧೀರ್ ಚೌಧರಿ ಅವರ ಪ್ರೈಮ್ ಟೈಮ್ ಶೋ ಡಿ ಕೋಡ್ ನಲ್ಲಿ ಪ್ರಸಾರವಾದ ಕಾರ್ಯಕ್ರಮದ ವಿರುದ್ಧ 20 ವರ್ಷದ ವಿದ್ಯಾರ್ಥಿ ಮಾನವನಷ್ಟ ಮೊಕದ್ದಮ್ಮೆ ಹೂಡಿದ್ದಾರೆ. , ಗೋದಿ ಮಿಡಿಯ ಪತ್ರಕರ್ತ ಎಂದೆ ಗುರುತಿಸಿಕೊಂಡಿರುವ ಸುಧೀರ್ ಚೌಧರಿ ಮತ್ತು ಡಿಡಿ ನ್ಯೂಸ್ ವಿರುದ್ಧ ಈ ಕೇಸು ದಾಖಲಾಗಿದೆ.

ಈ ಅರ್ಜಿಯ ಮೇಲೆ ವಿಚಾರಣೆ ನಡೆಸಿದ ನ್ಯಾಯಾಲಯವು ಸುಧೀರ್ ಚೌಧರಿ ಮತ್ತು ಡಿಡಿ ನ್ಯೂಸ್ ಗೆ ನೋಟಿಸ್ ಜಾರಿ ಮಾಡಿ ಪ್ರತಿಕ್ರಿಯೆ ಕೋರಿದೆ.

ಅರ್ಜಿದಾರ 20 ವರ್ಷದ ವಿಜಯ್ ಶರಾವತ್ ಪ್ರಕಾರ, ಸಂಸತ್ತನ್ನು ನಾಶಪಡಿಸುವ ಮತ್ತು ಭಾರತವನ್ನು ನೇಪಾಳವನ್ನಾಗಿ ಪರಿವರ್ತಿಸುವ ಬೆದರಿಕೆಯನ್ನು ನಾನು ಹಾಕಿದ್ದೇನೆ ಎಂದು ಅವರು ನನ್ನ ಹೇಳಿಕೆಯನ್ನು ತಿರುಚಿದ್ದಾರೆ ಎಂದು ಶರಾವತ್ ಹೇಳಿದ್ದಾರೆ.

ನಾನು ಅಂತಹ ಯಾವುದೇ ಹೇಳಿಕೆಯನ್ನು ನೀಡಿಲ್ಲ, ಹೇಳಿಕೆಗಳನ್ನು ತಮ್ಮ ಮೇಲೆ ತಪ್ಪಾಗಿ ಆರೋಪಿಸಲಾಗಿದೆ ಮತ್ತು ಪ್ರತಿವಾದಿಗಳು ಸತ್ಯವನ್ನು ಪರಿಶೀಲಿಸಲು ವಿಫಲರಾಗಿದ್ದಾರೆ ಎಂದು ಶರಾವತ್ ಹೇಳಿದ್ದಾರೆ.

ಈ ಪ್ರಕರಣವನ್ನು ಸೆಪ್ಟೆಂಬರ್ 22ಕ್ಕೆ ಮುಂದೂಡಲಾಗಿದೆ.