ರೈತರ ಮೇಲೆ ಗ್ರೆನೇಡ್ ಪ್ರಯೋಗ: ಸ್ಟೇಡಿಯಂಗಳನ್ನೇ ಜೈಲಾಗಿಸುವ ಯತ್ನ

0
477

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಕೇಂದ್ರ ಸರಕಾರದ ಕೃಷಿ ಕಾನೂನು ವಿರುದ್ಧ ದಿಲ್ಲಿ ಚಲೋ ರ್ಯಾಲಿ ಶುಕ್ರವಾರ ಘರ್ಷಣೆಗ್ರಸ್ತವಾಗಿದ್ದು ದಿಲ್ಲಿ-ಹರಿಯಾಣ ಗಡಿಯಲ್ಲಿ ರೈತರ ಮೇಲೆ ಅಶ್ರುವಾಯು, ಗ್ರೆನೇಡ್ ಪ್ರಯೋಗಿಸಲಾಗಿದೆ. ರೈತರ ರ್ಯಾಲಿ ದೇಶದ ರಾಜಧಾನಿಗೆ ತಲುಪುವಾಗ ಸ್ಟೇಡಿಯಂಗಳನ್ನು ಜೈಲಾಗಿ ಪರಿವರ್ತಿಸಲು ದಿಲ್ಲಿ ಪೊಲೀಸರು ಸರಕಾರದಿಂದ ಅನುಮತಿ ಯಾಚಿಸಿದ್ದಾರೆ. ಒಂಬತ್ತು ಸ್ಟೇಡಿಯಂಗಳನ್ನು ತಾತ್ಕಾಲಿಕ ಜೈಲನ್ನಾಗಿಸಲು ಪೊಲೀಸರು ನಿರ್ಧರಿಸಿದ್ದಾರೆ.

ಎರಡು ದಿವಸಗಳಿಂದ ನಡೆಯುತ್ತಿರುವ ರ್ಯಾಲಿಯಲ್ಲಿ ನೂರಾರು ರೈತರು ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಇದೇ ವೇಳೆ ರೈತರ ರ್ಯಾಲಿಯ ಮೇಲೆ ದಿಲ್ಲಿಯ ಗಡಿಯಲ್ಲಿ ಪೊಲೀಸರು ಗ್ರೆನೇಡ್ ಪ್ರಯೋಗಿಸಿದರು. ಅದಕ್ಕಿಂತ ಮೊದಲು ಅಶ್ರುವಾಯು ಪ್ರಯೋಗಿಸಿದ್ದರು. ಟಿಕ್ರಿ ಗಡಿಯಲ್ಲಿಯೂ ಘರ್ಷಣಾ ಸ್ಥಿತಿ ಮುಂದುವರಿಯುತ್ತಿದೆ.

ಈಗ ದಿಲ್ಲಿಯ ಗಡಿಯಲ್ಲಿ ಪೊಲೀಸರು ವಾಹನಗಳನ್ನು ತಡೆಯುತ್ತಿದ್ದಾರೆ. ಸ್ಥಳದಲ್ಲಿ ಹೆಚ್ಚುವರಿ ಪೊಲೀಸರನ್ನು ವಿನ್ಯಾಸಗೊಳಿಸಲಾಗಿದೆ. ಮೂರಕ್ಕೂ ಹೆಚ್ಚು ಸಲ ಪ್ರತಿಭಟನಾಕರರ ವಿರುದ್ಧ ಪೊಲೀಸರು ಗ್ರೆನೇಡ್ ಪ್ರಯೋಗಿಸಿದ್ದಾರೆ. 70ವರ್ಷಕ್ಕಿಂತ ಮೇಲ್ಪಟ್ಟವರೇ ರೈತರಲ್ಲಿ ಹೆಚ್ಚಿದ್ದಾರೆ. ಒಬ್ಬನೇ ಒಬ್ಬ ರೈತನನ್ನೂ ದಿಲ್ಲಿಗೆ ದಾಟಲು ಬಿಡಲಾರೆವು ಎಂದು ಪೊಲೀಸರು ನಿರ್ಧರಿಸಿದ್ದಾರೆ. ಏನೇ ಆದರೂ ಪ್ರತಿಭಟನೆಯೊಂದಿಗೆ ಮುಂದೆ ಸಾಗುವುದಾಗಿ ರೈತರು ಹೇಳಿದ್ದಾರೆ.