ಟ್ರ್ಯಾಕ್ಟರ್ ರ‌್ಯಾಲಿ ಹಿಂಸಾಚಾರದ ಆರೋಪಿ ದೀಪ್ ಸಿಧು ಜಾಮೀನು ಅರ್ಜಿ ಏಪ್ರಿಲ್ 8ಕ್ಕೆ ವಿಚಾರಣೆ

0
548

ಸನ್ಮಾರ್ಗ ವಾರ್ತೆ

ನವದೆಹಲಿ: ಜನವರಿ 26 ರ ಟ್ರಾಕ್ಟರ್ ರ‌್ಯಾಲಿ ಹಿಂಸಾಚಾರದಲ್ಲಿ ಭಾಗಿಯಾಗಿರುವ ಆರೋಪದಲ್ಲಿ ಬಂಧಿತನಾಗಿರುವ ಪಂಜಾಬಿ ನಟ ದೀಪ್ ಸಿಧು ಅವರ ಜಾಮೀನು ಅರ್ಜಿಯನ್ನು ದೆಹಲಿ ನ್ಯಾಯಾಲಯವು ಏಪ್ರಿಲ್ 8 ರಂದು ವಿಚಾರಣೆ ನಡೆಸಲಿದೆ.

ನ್ಯಾಯಾಲಯದ ವ್ಯಾಪ್ತಿಯ ಸಮಸ್ಯೆ ಉದ್ಭವಿಸಿದ ನಂತರ ಸಿಧು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆಯನ್ನು ಟಿಸ್ ಹಜಾರಿ ನ್ಯಾಯಾಲಯವು ಏಪ್ರಿಲ್ 8ಕ್ಕೆ ವಿಚಾರಣೆ ಮುಂದೂಡಿದೆ. ಕಳೆದ ಗಣರಾಜ್ಯೋತ್ಸವದಂದು ಕೆಂಪು ಕೋಟೆ ಬಳಿ ನಡೆದ ಹಿಂಸಾಚಾರವನ್ನು ಪ್ರಚೋದಿಸಿದ ಆರೋಪ ಹೊತ್ತಿರುವ ಸಿಧು, ತನ್ನ ಜಾಮೀನು ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಘಟನೆ ನಡೆದ ಬಳಿಕ ತಪ್ಪಿಸಿಕೊಂಡಿದ್ದ ಸಿಧು ವನ್ನು ಫೆಬ್ರವರಿ 9 ರಂದು ಪೊಲೀಸರು ಬಂಧಿಸಿದ್ದರು. ಹಿಂಸಾಚಾರಕ್ಕೆ ಸಂಬಂಧಿಸಿದಂತೆ ನೋಂದಾಯಿಸಲಾದ ಎಫ್‌ಐಆರ್‌ನಲ್ಲಿ ಸಿಧು ಮತ್ತು ಇತರರ ಹೆಸರುಗಳನ್ನು ಸೇರಿಸಲಾಗಿದೆ ಎಂದು ದೆಹಲಿ ಪೊಲೀಸರು ಈ ಹಿಂದೆ ಹೇಳಿದ್ದರು. ಸದ್ಯ ದೆಹಲಿ ಪೊಲೀಸರ ಕಸ್ಟಡಿಯಲ್ಲಿರುವ ದೀಪ್ ಸಿಧು ಬಿಜೆಪಿ ಬೆಂಬಲಿತ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು.