ಈ ಎಳೆಯ ಬಾಲಕಿ ಇನ್ನು ಜೈನ ಸನ್ಯಾಸಿನಿ!

0
317

ಸನ್ಮಾರ್ಗ ವಾರ್ತೆ

ಅಹ್ಮದಾಬಾದ್: ‌ಗುಜರಾತಿನ 9ರ ಹರೆಯದ ದೇವಾಂಶಿ ಎಂಬ ಬಾಲಕಿ ಜೈನ ದೀಕ್ಷೆ ಪಡೆದುಕೊಂಡು ಸನ್ಯಾಸಿಯಾದ ವರದಿ ಎಲ್ಲರ ಗಮನ ಸೆಳೆದಿದೆ. ಸೂರತ್‌ನ ಕೋಟ್ಯಾಧೀಶ ದಾನಿಶ್ ಮತ್ತು ಅಮಿ ಸಂಗ್ವಿ ದಂಪತಿಯ ಇಬ್ಬರು ಪುತ್ರಿಯರಲ್ಲಿ ಹಿರಿಯಳಾಗಿರುವ ಈಕೆ ಇದೀಗ ಲೌಕಿಕ ಜೀವನವನ್ನು ತ್ಯಜಿಸಿ ಜೈನ ದೀಕ್ಷೆ ತೆಗೆದುಕೊಂಡಿದ್ದಾರೆ
ಈಕೆಯ ತಂದೆ ದಾನಿಶ್ ಸೂರತ್ ನಲ್ಲಿ ವಜ್ರದ ಪಾಲಿಶಿಂಗ್ ಮತ್ತು ರಫ್ತು ಉದ್ಯಮ ನಡೆಸುವ ಸಾಂಗ್ವಿ ಅಂಡ್ ಸನ್ಸ್ ಕಂಪೆನಿಯ ಒಡೆಯರಾಗಿದ್ದಾರೆ.

ಸನ್ಯಾಸಿ ಆಗುವುದೆಂದರೆ ಸಕಲ ಐಷಾರಾಮಿ ಸವಲತ್ತುಗಳನ್ನು ತ್ಯಜಿಸುವುದು ಎಂದರ್ಥ. ಇನ್ನು ಮುಂದೆ ತಂದೆಯ ಐಷಾರಾಮಿ ಕಾರುಗಳಲ್ಲಿ ದೇವಾಂಶಿ ಪ್ರಯಾಣಿಸುವ ಹಾಗಿಲ್ಲ. ಬ್ರಾಂಡೆಡ್ ಬಟ್ಟೆಗಳನ್ನು ಧರಿಸುವಂತಿಲ್ಲ. ಫೈವ್ ಸ್ಟಾರ್ ಸೆವೆನ್ ಸ್ಟಾರ್ ಹೋಟೆಲುಗಳಲ್ಲಿ ಬಗೆಬಗೆಯ ತಿನಿಸು ಮೆಲ್ಲುವಂತಿಲ್ಲ. ಇನ್ಮುಂದೆ ಬಿಳಿಯ ನೂಲಿನ ವಸ್ತ್ರಧರಿಸಿ ಕಟ್ಟುನಿಟ್ಟಿನ ಧಾರ್ಮಿಕ ವಿಧಿ-ವಿಧಾನಗಳನ್ನು ದೇವಾಂಶಿ ಪಾಲಿಸಬೇಕಿದೆ.

ಇನ್ನೂ ಸನ್ಯಾಸತ್ವ ಎಂದರೇನೆಂದೇ ತಿಳಿಯದ ವಯಸ್ಸಿನಲ್ಲಿ ದೇವಾಂಶಿ ಜೈನ ಗುರು ಆಚಾರ್ಯ ವಿಜಯ ಕೀರ್ತಿಯುಶ್ ಸೂರಿಜಿ ಮಹಾರಾಜ್ ಅವರ ಸಮ್ಮುಖದಲ್ಲಿ ಸೂರತ್‌ನ ವೇಸು ಪ್ರದೇಶದಲ್ಲಿ ಜೈನ ಧೀಕ್ಷೆ ಪಡೆದುಕೊಂಡಿದ್ದಾರೆ. ಈವರೆಗೆ 377 ದೀಕ್ಷಾ ಕಾರ್ಯಕ್ರಮಗಳಲ್ಲಿ ಭಾಗಿಯಾಗಿರುವ ದೇವಾಂಶಿ ಇದುವರೆಗೆ ವಿವಿಧ ಧಾರ್ಮಿಕ ಗುರುಗಳ ಜೊತೆ 700 ಕಿಲೋಮೀಟರ್ ಹೆಜ್ಜೆಹಾಕಿದ್ದಾರೆ.