ದೇವೀಂದರ್ ಬಂಧನ: ಈ ಬಾರಿ ಗಣರಾಜ್ಯೋತ್ಸವ ಸುರಕ್ಷಿತ- ಉದ್ಧವ್ ಠಾಕರೆ

0
1817

ಸನ್ಮಾರ್ಗ ವಾರ್ತೆ

ಮುಂಬೈ, ಜ.18: ಜಮ್ಮು ಕಾಶ್ಮೀರದ ಪೊಲೀಸರು ಭಯೋತ್ಪಾದಕರಿಗೆ ನೆರವು ನೀಡುತ್ತಿದ್ದಾರೆ ಎಂದು ಶಿವಸೇನೆ ಆರೋಪಿಸಿದೆ. ಡಿಎಸ್‍ಪಿ ದೇವಿಂದರ್ ಸಿಂಗ್ ಬಂಧನದಿಂದಾಗಿ ಶಿವಸೇನೆ ಈ ರೀತಿ ಕಟುವಾಗಿ ಟೀಕಿಸಿದ್ದು ಅದರ ಮುಖವಾಣಿ ಸಾಮ್ನಾದ ಲೇಖನದಲ್ಲಿ ಹೀಗೆ ಹೇಳಲಾಗಿದೆ. ಗಡಿದಾಟಿದ ಭಯೋತ್ಪಾದನೆ ಕಾಶ್ಮೀರದಲ್ಲಿ ವ್ಯಾಪಕವಾಗಿದೆ. ಭಯೋತ್ಪಾದಕರನ್ನು ಗಡಿ ದಾಟಿಸಿ ಬಿಡಲು ಪೊಲೀಸರು ಸಹಾಯ ಮಾಡುತ್ತಿದ್ದಾರೆ. ಇದೇ ಅಪರಾಧಕ್ಕಾಗಿ ರಾಷ್ಟ್ರಪತಿ ಪದಕ ನೀಡಿದ ಪೊಲೀಸಧಿಕಾರಿಯನ್ನು ಬಂಧಿಸಲಾಗಿದೆ ಎಂದು ಸಾಮ್ನಾ ಹೇಳಿದೆ.

ಜಮ್ಮು ಕಾಶ್ಮೀರ ವಿಶೇಷ ಅಧಿಕಾರ ನೀಡುವ 370ನೆ ವಿಧಿಯನ್ನು ಕೇಂದ್ರ ಸರಕಾರ ರದ್ದುಪಡಿಸಿದ್ದು ಐತಿಹಾಸಿಕ ತೀರ್ಮಾನವಾಗಿದೆ. ಇದರಲ್ಲಿ ಕಾಶ್ಮೀರದ ಜನರು ಸಂತೋಷಪಟ್ಟರು. ರಿಪಬ್ಲಿಕ್ ದಿನಾಚರಣೆಯ ವೇಳೆ ಭಾರತದ ಜನರಿಗೆ ಈ ಸಂತೋಷ ಕಾರಣವೂ ಆಗಲಿದೆ. ಭಯೋತ್ಪಾದಕರನ್ನು ಬಂಧಿಸಿದ್ದರಿಂದ ಈ ವರ್ಷದ ರಿಪಬ್ಲಿಕ್ ಡೇ ಸುರಕ್ಷಿತವಾಗಲಿದೆ ಎಂದು ಸಾಮ್ನಾದಲ್ಲಿ ಹೇಳಲಾಗಿದೆ.