ಖರ್ಜೂರ, ಧರ್ಮ ಗ್ರಂಥ ವಿತರಿಸಿದ ಪ್ರಕರಣ: ಯುಎಇ ಕಾನ್ಸುಲೇಟ್ ಜನರಲ್‌ಗೆ ಕಸ್ಟಮ್ಸ್‌‌ನಿಂದ ಶೋಕಾಸ್ ನೋಟಿಸು

0
391

ಸನ್ಮಾರ್ಗ ವಾರ್ತೆ

ಕೊಚ್ಚಿ: ಚ್ಯಾನೆಲ್  ಮೂಲಕ ಧಾರ್ಮಿಕ ಗ್ರಂಥ, ಖರ್ಜೂರ ವಿತರಿಸಿದ ಪ್ರಕರಣದಲ್ಲಿ ಯುಎಇ ಕಾನ್ಸುಲೇಟ್ ಜನರಲ್, ಅಟಾಷೆಯವರಿಗೆ ಕಾರಣ ಕೇಳಿ ನೋಟಿಸು ಜಾರಿ ಮಾಡಲು ಕೇಂದ್ರ ವಿದೇಶ ಸಚಿವಾಲಯ ಕಸ್ಟಮ್ಸ್ ಅಧಿಕಾರಿಗಳಿಗೆ ಅನುಮತಿ ನೀಡಿದೆ. ಅಟಾಷೆ ಮತ್ತು ಕಾನ್ಸುಲೆಟ್ ಜನರಲ್ ಪ್ರಕರಣದಲ್ಲಿ ಒಳಗೊಂಡಿರುವ ಹಿನ್ನೆಲೆಯಲ್ಲಿ ಕಸ್ಟಮ್ಸ್ ಅಧಿಕಾರಿಗಳು ಕೇಂದ್ರದ ಅನುಮತಿ ಕೇಳಿದ್ದರು. ನಯತಂತ್ರ ಚ್ಯಾನೆಲ್ ಮೂಲಕ ಪಾರ್ಸಲಿನಲ್ಲಿ ಧಾರ್ಮಿಕ ಗ್ರಂಥ, ಖರ್ಜೂರ ತಂದುದಕ್ಕೆ ಎರಡು ಪ್ರಕರಣಗಳನ್ನು ಕಸ್ಟಮ್ಸ್ ದಾಖಲಿಸಿಕೊಂಡಿದೆ. ಮೂರು ವರ್ಷದಲ್ಲಿ ರಾಜತಾಂತ್ರಿಕ ಬ್ಯಾಗ್ ಮೂಲಕ 17,000 ಕಿಲೊ ಗ್ರಾಂ ಖರ್ಜೂರ ರಾಜ್ಯಕ್ಕೆ ಬಂದಿದೆ ಎಂದು ಕಸ್ಟಮ್ಸ್ ಪತ್ತೆಹಚ್ಚಿದೆ.

ಪ್ರಕರಣದಲ್ಲಿ ಮಾಜಿ ಸಚಿವ ಕೆ.ಟಿ ಜಲೀಲ್‍ರನ್ನು ಮತ್ತು ಪ್ರೊಟೊಕಾಲ್ ಅಧಿಕಾರಿಗಳ ಸಹಿತ ಖರ್ಜೂರ ತರಿಸಿದ್ದಕ್ಕೆ ಸಂಬಂಧಿಸಿ ವಿಚಾರಣೆ ಮಾಡಲಾಗಿತ್ತು. ನಯತಂತ್ರ ಚ್ಯಾನೆಲ್ ಮೂಲಕ ಬಂದಿರುವ ಖರ್ಜೂರಕ್ಕೆ ತೆರಿಗೆ ಹಾಕಿರಲಿಲ್ಲ. ಈ ಚ್ಯಾನೆಲ್ ಮೂಲಕ ಬರುವ ವಸ್ತು ಹೊರಗೆ ವಿತರಿಸುವುದು ನಿಯಮ ವಿರುದ್ಧ ಹಾಗೂ ಕಾನೂನಿನ ಉಲ್ಲಂಘನೆಯಾಗಿದೆ ಎಂದು ಕಸ್ಟಮ್ಸ್ ತಿಳಿಸಿದೆ.