ಮಂಗಳೂರು ಪ್ರಧಾನ ಅಂಚೆ ಕಚೇರಿಯ ಉದ್ಯೋಗಿ ಶ್ರೀಮತಿ ಹರಿಣ ಅವರಿಗೆ ಅಂಚೆ ಜೀವ ವಿಮೆಯಲ್ಲಿ ವಿಭಾಗೀಯ ಮಟ್ಟದ ಪ್ರಶಸ್ತಿ

0
176

ಸನ್ಮಾರ್ಗ ವಾರ್ತೆ

ಪಾಂಡೇಶ್ವರದಲ್ಲಿರುವ ಮಂಗಳೂರು ಪ್ರಧಾನ ಅಂಚೆ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಹರಿಣ ಲಮಾಣಿ ಅವರು 2023-24ನೇ ಆರ್ಥಿಕ ವರ್ಷದಲ್ಲಿ ಅಂಚೆ ಜೀವ ವಿಮೆಯಲ್ಲಿ ಗರಿಷ್ಠ ಸಾಧನೆಗಾಗಿ ವಿಭಾಗೀಯ ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದು ಅವರಿಗೆ ಈ ಪ್ರಶಸ್ತಿಯನ್ನು ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ದಕ್ಷಿಣ ಕರ್ನಾಟಕ ವಲಯದ ಅಂಚೆ ಸೇವೆಗಳ ನಿರ್ದೇಶಕರಾದ ಶ್ರೀ ಸಂದೇಶ ಮಹದೇವಪ್ಪ ಅವರು ನೀಡಿದರು.

ಕಾರ್ಯಕ್ರಮದಲ್ಲಿ ಮಂಗಳೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕರಾದ ಶ್ರೀ ಸುಧಾಕರ್ ಮಲ್ಯ ಮತ್ತು ಉಪ ಅಧೀಕ್ಷಕ ಶ್ರೀ ದಿನೇಶ್. ಪಿ ಮತ್ತು ಇತರ ಅಧಿಕಾರಿಗಳು, ಮಂಗಳೂರು ಅಂಚೆ ವಿಭಾಗದ ಸಿಬಂಧಿಗಳು ಉಪಸ್ಥಿತರಿದ್ದರು.

ಈ ಸಾಧನೆಗಾಗಿ ಶ್ರೀಮತಿ ಹರಿಣ ಲಮಾಣಿ ಅವರನ್ನು ಮಂಗಳೂರು ಪ್ರಧಾನ ಅಂಚೆ ಕಚೇರಿಯ ವರಿಷ್ಠ ಅಂಚೆ ಪಾಲಕರಾದ ಶ್ರೀ ಶ್ರೀನಾಥ್ ಬಸ್ರೂರು ಅವರು ಅಭಿನಂದಿಸಿದ್ದಾರೆ.