ಅಸಂಬದ್ಧಗಳಿಗೆ ಉತ್ತರಿಸುವುದಿಲ್ಲ; ನಟಿ ಕಂಗನಾರ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರಿಯಾಂಕಾ ಗಾಂಧಿ

0
215

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ನಟಿ ಬಿಜೆಪಿ ಅಭ್ಯರ್ಥಿ ಕಂಗನಾ ರಣಾವತ್ ತನ್ನ ಸಹೋದರ ರಾಹುಲ್ ಗಾಂಧಿಯ ವಿರುದ್ಧ ನೀಡಿದ ಹೇಳಿಕೆಗೆ ಕಟುವಾದ ಧಾಟಿಯಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಉತ್ತರಿಸಿದ್ದಾರೆ.

ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ರಾಜಕೀಯಕ್ಕೆ ಸೂಕ್ತ ವ್ಯಕ್ತಿಗಳಲ್ಲ ಎಂದು ಕಂಗನಾ ಹೇಳಿದ್ದರು. ಇದಕ್ಕೆ ಉತ್ತರಿಸಿದ ಪ್ರಿಯಾಂಕಾಗಾಂಧಿ ಇಂತಹ ಅಸಂಬದ್ಧಗಳಿಗೆ ಉತ್ತರಿಸುವುದಿಲ್ಲ ಎಂದರು.

ಇಬ್ಬರೂ ತಾಯಿಯ ಬಯಕೆಗಳ ಬಲಿಪಶುಗಳು, ತಾಯಿ ಕೂಡ ನಿರ್ಬಂಧಿಸಿ ರಾಜಕೀಯ ಪ್ರವೇಶಿಸಿದ್ದು ಎಂದು ಕಂಗನಾ ಇಂಡಿಯಾ ಟುಡೆಗೆ ನೀಡಿದ ಸಂದರ್ಶನದಲ್ಲಿ ಹೇಳಿದರು. ಕಂಗನಾ ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಸೀಟಿನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.

ನಮ್ಮ ಬಗ್ಗೆ ಕಂಗನಾ ಮಾತಾಡಿದ್ದಕ್ಕೆ ಕೃತಜ್ಞತೆ ಇದೆ. ಅವರು ಹೇಳುವ ಎಲ್ಲ ಅಸಂಬಂಧಗಳಿಗೆ ತಾನು ಉತ್ತರಿಸಬೇಕಾ ಎಂದು ಪ್ರಿಯಾಂಕಾ ಕೇಳಿದರು. ತನ್ನ ತಂದೆ ಜೀವಿಸಿದ್ದಾಗ ಕೂಡ ಬಿಜೆಪಿ ಸೋನಿಯಾ ಗಾಂಧಿಯವರನ್ನು ಟೀಕಿಸಿತ್ತು ಎಂದು ಪ್ರಿಯಾಂಕಾ ಗಾಂಧಿ ಹೇಳಿದರು. ಕಾಂಗ್ರೆಸ್ ಸನಾತನ ಧರ್ಮಕ್ಕೆ ವಿರುದ್ಧವಾಗಿದೆ ಎಂಬ ಮೋದಿಯ ಆರೋಪವನ್ನು ಕೂಡ ಪ್ರಿಯಾಂಕಾ ಈ ಸಂದರ್ಭದಲ್ಲಿ ತಳ್ಳಿ ಹಾಕಿದರು.

LEAVE A REPLY

Please enter your comment!
Please enter your name here