ಬಂಟ್ವಾಳದಲ್ಲಿ ಮೃತಪಟ್ಟ ಮಹಿಳೆಯ ಫೋಟೋ, ಖಾಸಗಿ ವಿವರಗಳನ್ನು ಹಂಚಿಕೊಂಡರೆ ಕಠಿಣ ಕ್ರಮ: ದ ಕ ಎಸ್ಪಿ

0
1195

ಸನ್ಮಾರ್ಗ ವಾರ್ತೆ

ಮಂಗಳೂರು ಎಪ್ರಿಲ್ 20- ಬಂಟ್ವಾಳದಲ್ಲಿ ಕೋರೋನಾದಿಂದಾಗಿ ಮೃತಪಟ್ಟ ಮಹಿಳೆಯ ಫೋಟೋವನ್ನು ಮತ್ತು ಇನ್ನಿತರ ಖಾಸಗಿ ಮಾಹಿತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಮಾಹಿತಿಗಳು ಲಭ್ಯವಾಗಿದ್ದು, ಇದು ಶಿಕ್ಷಾರ್ಹ ಅಪರಾಧವಾಗಿದೆ ಎಂದು ಜಿಲ್ಲಾ ಸುಪರಿಟೆಂಡೆಂಟ್ ಆಫ್ ಪೊಲೀಸ್ ಬಿ ಎಂ ಲಕ್ಷ್ಮೀಪ್ರಸಾದ್ ಅವರು ಎಚ್ಚರಿಕೆ ನೀಡಿದ್ದಾರೆ.

ಯಾರು ಕಾನೂನನ್ನು ಉಲ್ಲಂಘಿಸಿ ಇಂಥ ಕೃತ್ಯವೆಸಗುತ್ತಾರೋ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದವರು ಹೇಳಿದ್ದಾರೆ. ಮೃತಪಟ್ಟ ಮಹಿಳೆಯ ಕುರಿತಂತೆ ಫೋಟೋವನ್ನು ಮತ್ತು ಇನ್ನಿತರ ಖಾಸಗಿ ಮಾಹಿತಿಯನ್ನು ಹಂಚಿಕೊಳ್ಳುವವರ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ಅವರ ಬಗ್ಗೆ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದವರು ಹೇಳಿದ್ದಾರೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.