ಪ್ರಧಾನಿ ಕ್ಷಮೆ ಕೇಳಬೇಕೆಂದು ಬಯಸುವುದಿಲ್ಲ. ತೀರ್ಮಾನ ಕೈಗೊಳ್ಳುವಾಗ ರೈತರ ಸಮ್ಮತಿಯಿಲ್ಲದೆ ಸಾಧ್ಯವಿಲ್ಲ- ರಾಕೇಶ್ ಟಿಕಾಯತ್

0
218

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,: ದೇಶದ ಪ್ರಧಾನಿ ರೈತರೊಂದಿಗೆ ಕ್ಷಮೆ ಕೇಳಬೇಕೆಂದು ಮತ್ತು ಅವರ ವರ್ಚಸ್ಸಿಗೆ ಹಾನಿ ಮಾಡಲು ಬಯಸುವುದಿಲ್ಲ. ಒಂದು ವರ್ಷದಿಂದ ನಡೆದ ರೈತರ ಹೋರಾಟದಿಂದ ಮೂರು ವಿವಾದ ಕೃಷಿ ಕಾನೂನುಗಳನ್ನು ಕೇಂದ್ರ ಸರಕಾರ ರದ್ದುಪಡಿಸಿದ ನಂತರ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ನಾಯಕ ರಾಖೇಸ್ ಟಿಕಾಯತ್ ಟ್ವೀಟ್ ಮಾಡಿದ್ದಾರೆ.

ನಾವು ಗದ್ದೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇವೆ. ಆದರೆ, ಅದಕ್ಕೆ ಅರ್ಹ ಪರಿಗಣನೆ ದಿಲ್ಲಿ ಕೊಡಲಿಲ್ಲ ಎಂದು ಅವರು ಟ್ವೀಟ್ ಮಾಡಿದರು. ರದ್ದುಪಡಿಸಿದ ಮೂರು ಕೃಷಿ ಕಾನೂನು ಮರಳಿ ಬರಲಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದನ್ನು ಟಿಕಾಯತ್ ಕಟುವಾಗಿ ಟೀಕಿಸಿದ್ದರು. ಆನಂತರ ತೋಮರ್ ತಿದ್ದಿ ಕೃಷಿ ಕಾನೂನು ತರುವುದು ಕೇಂದ್ರದ ಪರಿಗಣನೆಯಲ್ಲಿಲ್ಲ ಎಂದು ಹೇಳಿದ್ದರು. ರೈತ ಕಾನೂನು ಪುನಃ ತಂದರೆ ಪ್ರತಿಭಟನೆ ಪುನರಾರಂಭವಾಗಲಿದೆ ಎಂದು ಟಿಕಾಯತ್ ಹೇಳಿದರು.