ಸನ್ಮಾರ್ಗ ವಾರ್ತೆ
ಕತರ್: ವಿಶ್ವ ಆರೋಗ್ಯ ಸಂಸ್ಥೆಯ ಕ್ಯಾನ್ಸರ್ ಸಂಶೋಧನಾ ಸಂಸ್ಥೆಗೆ ಕತರ್ನ ಇನಾಸ್ ಅಲ್ ಕುವಾರಿ ಆಯ್ಕೆಯಾಗಿದ್ದಾರೆ. ಇವರು ಹಮ್ದ್ ಮೆಡಿಕಲ್ ಕಾರ್ಪೊರೇಷನ್ ಲ್ಯಾಬೋರೇಟರಿ ಮೆಡಿಸಿನ್ ಅಂಡ್ ಪೆಥಾಲಜಿ ವಿಭಾಗದ ಅಧ್ಯಕ್ಷೆಯೂ ಆಗಿದ್ದಾರೆ.
ಅಂತಾರಾಷ್ಟ್ರೀಯ ಕ್ಯಾನ್ಸರ್ ಸಂಶೋಧನಾ ಏಜೆನ್ಸಿಯು ವಿಶ್ವ ಆರೋಗ್ಯ ಸಂಸ್ಥೆಯ ಸ್ವತಂತ್ರ ಕ್ಯಾನ್ಸರ್ ಏಜೆನ್ಸಿಯಾಗಿ ಗುರುತಿಸಿಕೊಂಡಿದೆ. 27 ರಾಷ್ಟ್ರಗಳ ಪ್ರತಿನಿಧಿಗಳು ಇದರಲ್ಲಿ ಇರುತ್ತಾರೆ. ಜಾಗತಿಕವಾಗಿ ನಡೆಯುವ ವಿವಿಧ ಕ್ಯಾನ್ಸರ್ ಸಂಶೋಧನೆಗಳನ್ನು ಇದು ಸಮನ್ವಯ ಗೊಳಿಸುತ್ತದೆ.
ಈ ಸಂಸ್ಥೆಗೆ ಆಯ್ಕೆಯಾದ ಕತರ್ನ ಮೊದಲ ವ್ಯಕ್ತಿ ಇನಾಸ್ ಆಗಿದ್ದಾರೆ. ಇವರಿಗೆ ನಾಲ್ಕು ವರ್ಷಗಳ ಅವಧಿಯಿರುತ್ತದೆ ಎಂದು ತಿಳಿದು ಬಂದಿದೆ.












