ಕುಡಿದ ಅಮಲಿನಲ್ಲಿ ಸ್ವಂತ ತಾಯಿಯನ್ನೇ ಕೊಂದ ಮಗ!

0
762

ಸನ್ಮಾರ್ಗ ವಾರ್ತೆ

ಕೊಟ್ಟಯಮ್,ಜೂ.1: ಮದ್ಯದ ಅಮಲಿನಲ್ಲಿ ಪುತ್ರನೊಬ್ಬ ತನ್ನ ಸ್ವಂತ ತಾಯಿಯನ್ನೇ ಕೊಂದ ಘಟನೆ ಕೋಟ್ಟಯಮ್ ಜಿಲ್ಲೆಯ ಚಮಗನಶ್ಶೇರಿ ಎಂಬಲ್ಲಿ ನಡೆದಿದೆ. ಜಿತಿನ್ ಬಾಬು ಎಂಬಾತ ತಾನು ಬರುವಾಗ ಊಟ ತಯಾರಿಸಲಿಲ್ಲ ಎಂದು ಜಗಳ ತೆಗೆದು ತಾಯಿಯನ್ನೇ ಕೊಚ್ಚಿ ಕೊಂದನು. ಕುಂಞಆನಮ್ಮ (60)  ಮಗನ ಕೈಯಿಂದಲೇ ಹತ್ಯೆಗೀಡಾದ ದುರ್ದೈವಿ. ಶನಿವಾರ ರಾತ್ರಿ ಹತ್ತು ಗಂಟೆಯ ವೇಳೆಗೆ ಈ ಘಟನೆ ನಡೆದಿದ್ದು, ಕೊಲೆ ಮಾಡಿದ ಬಳಿಕ ಆತನೇ ಊರವರಿಗೆ ಸುದ್ದಿ ಮುಟ್ಟಿಸಿದ್ದಾನೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.