ಆಧಾಯ ತೆರಿಗೆ ಅಧಿಕಾರಿಗಳು ಅತಿಥಿಗಳಿದ್ದಂತೆ; ಉದಯ ನಿಧಿ ಸ್ಟಾಲಿನ್

0
1193

ಸನ್ಮಾರ್ಗ ವಾರ್ತೆ

ಚೆನ್ನೈ, ಅ. 6: ಡಿಎಂಕೆ ಕಾರ್ಯಕರ್ತರ ಮನೆಗಳಿಗೆ ಆದಾಯ ತೆರಿಗೆ ಇಲಾಖೆ ದಾಳಿ ಮಾಡುತ್ತಿರುವುದನ್ನು ಉದಯ ನಿಧಿ ಸ್ಟಾಲಿನ್  ಟೀಕಿಸಿದ್ದಾರೆ.

ಚುನಾವಣೆ ಬರುವಾಗ ದಾಳಿಗಳು ಆಗುತ್ತಿವೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಿಮ್ಮ ಅತಿಥಿಗಳು ಎಂದು ಉದಯ ನಿಧಿ ಸ್ಟಾಲಿನ್ ಹೇಳಿದರು.

ಈಗಿದು ತುಂಬಾ ಸಾಮಾನ್ಯವಾಗಿದೆ. ಚುನಾವಣೆ ಹತ್ತಿರವಾಗುವಾಗ ದಾಳಿಗಳನ್ನು ಮಾಡುತ್ತಾರೆ. ಅವರೀಗ ನಮ್ಮ ಅತಿಥಿಗಳು ನಾವು ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ ಎಂದು ಅವರು ಹೇಳಿದರು.

ಡಿಎಂಕೆ ಸಂಸದ ಮಾಜಿ ಕೇಂದ್ರ ಸಚಿವ ಎಸ್ ಜಗತ್ ರಕ್ಷಕ್‍ರ ಚೆನ್ನೈನ ಮನೆಗಳಿಗೆ ನಿನ್ನೆ ಐಟಿ ದಾಳಿ ಆಗಿದ್ದು ಈಗಲೂ ಮುಂದುವರಿಯುತ್ತಿದೆ. ಅವರಿಗೆ ಸೇರಿದ 40 ಸ್ಥಳಗಳಿಗೆ ಅದಾಯ ಇಲಾಖೆ ಗುರುವಾರ ದಾಳಿ ಶುರು ಮಾಡಿತ್ತು.

ರಾಜ್ಯದ ಜಾತಿ ತಾರತಮ್ಯದ ಕುರಿತು ರಾಜ್ಯಪಾಲರ ಹೇಳಿಕೆಗೆ, ಇತರ ರಾಜ್ಯಗಳಿಗೆ ಹೋಲಿಸಿದರೆ ತಮಿಳ್ನಾಡನಲ್ಲಿ ಜಾತಿ ಭೇದ ಕಡಿಮೆ ಇದೆ. ರಾಜ್ಯಪಾಲ ತನ್ನ ಕೆಲಸ ಮಾಡದೆ ರಾಜಕೀಯ ಆಟವಾಡುತ್ತಿದ್ದಾರೆ ಎಂದು ಉದಯ ನಿಧಿ ಆರೋಪಿಸಿದರು.