ಸಂಜಯ್ ರಾವತ್ ನಿಕಟವರ್ತಿಗಳ ವಿರುದ್ಧ ಇಡಿ ಕಾರ್ಯಾಚರಣೆ: ಬಂಧನ

0
426

ಸನ್ಮಾರ್ಗ ವಾರ್ತೆ

ಮುಂಬಯಿ, ಜು.20: ಮುಂಬಯಿಯ ಕೊರೊನ ಹಗರಣದಲ್ಲಿ ಶಿವಸೇನೆ ಸಂಸದ ಸಂಜಯ್ ರಾವುತ್ ನಿಕಟವರ್ತಿ ವೈದ್ಯರಾದ ಡಾ. ಸುಜಿತ್ ಪಾಟ್‍ಕರ್ ಮತ್ತು ಡಾ. ಕಿಶೋರ್ ಬಿಸುರೆಯವರನ್ನು ಇಡಿ ಬಂಧಿಸಿದೆ.

ಡಾ. ಬಿಸುರೆಯವರು ದಹಿಸರ್ ನಲ್ಲಿರುವ ಕೊರೊನ ಫೀಲ್ಡ್ ಹಾಸ್ಪಿಟಲ್‍ನ ಪ್ರಮುಖರಾಗಿದ್ದಾರೆ. ಈ ಆಸ್ಪತ್ರೆಗೆ ಸಂಜೀವ್ ಜೈಸ್ವಾಲ್ ಮನ್ನಣೆ ನೀಡಿದ್ದರು. ಇದರಲ್ಲಿ ಸುಜಿತ್ ಪಾಟ್‍ಕರ್ ಹಸ್ತಕ್ಷೇಪ ನಡೆಸಿರಬಹುದು ಎಂದು ಇಡಿ ಶಂಕಿಸಿದೆ.

ಇಡಿ ಇತ್ತೀಚೆಗೆ ಕೊರೊನ ಹಗರಣದ ಕುರಿತು ತನಿಖೆ ಆರಂಭಿಸಿತ್ತು. ಜೂನ್‍ನಲ್ಲಿ ಇಡಿ ಹದಿನಾರು ಜಾಗಗಳಿಗೆ ದಾಳಿ ಮಾಡಿತ್ತು. ನಂತರ ಇಡಿ ಸುಜಿತ್ ಪಾಟ್‍ಕರ್ ಮನೆಗೆ ದಾಳಿ ಮಾಡಿದೆ. ಸುಜಿತ್ ಪಾಟ್‍ಕರ್ ಲೈಫ್‍ಲೈನ್ ಹಾಸ್ಪಿಟಲ್ ಮ್ಯಾನೇಜ್ ಮೆಂಟ್‍ನಲ್ಲಿ ನಿರ್ದೇಶಕ ಸ್ಥಾನದಲ್ಲಿದ್ದಾರೆ. ಆದುದರಿಂದ ಲೈಫ್‍ಲೈನ್ ಆಸ್ಪತ್ರೆಗೆ ಸಂಬಂಧಿಸಿದ ಸ್ಥಳಗಳಿಗೆ ಇಡಿ ದಾಳಿ ಮಾಡಿತ್ತು.

ಕೊರೊನ ಸಮಯದಲ್ಲಿ ಆಸ್ಪತ್ರೆ ಕಟ್ಟುವಲ್ಲಿ ಹಗರಣ ನಡೆದಿದೆ ಎಂದು ಇಡಿ ಶಂಕಿಸುತ್ತಿದೆ. ಕಳೆದ ತಿಂಗಳು ಇಡಿ ಸಾಂತ್ರಕ್ರೂಝ್, ಮಲಾಡ್ ಪರೆಲ್, ವರ್ಲಿಗೆ ದಾಳಿ ಮಾಡಿತ್ತು. 2022 ಆಗಸ್ಟ್ 24ರ ಎಫ್‍ಐಆರ್ ಆಧಾರದಲ್ಲಿ ಇಡಿ ದಾಳಿ ಮಾಡಿದೆ. ಪಾಟ್‍ಕರ್ ಅಲ್ಲದೆ ಶಿವಸೇನೆ ಉದ್ಧವ್ ಠಾಕರೆ ಬಣದ ಇನ್ನೊಬ್ಬ ಪದಾಧಿಕಾರಿ ಸೂರಜ್ ಚವ್ಹಾಣ್‍ರಿಗೆ ಸಂಬಂಧಿಸಿದ ಸ್ಥಳಗಳಿಗೂ ಇಡಿ ದಾಳಿ ಮಾಡಿದೆ.

ಕೊರೊನ ಕಾಲದಲ್ಲಿ ಹಲವು ಗುತ್ತೆಯಲ್ಲಿ ಹಗರಣ ನಡೆದಿದೆ ಎಂದು ಬಿಜೆಪಿಯ ಮಾಜಿ ಸಂಸದ ಕಿರಿಟ್ ಸೊಮಯ್ಯ ಆರೋಪ ಹೊರಿಸಿದ್ದರು. ಟೆಂಡರ್ ಪಡೆಯುವುದಕ್ಕಾಗಿ ಲೈಫ್‍ಲೈನ್ ಹಾಸ್ಪಿಟಲ್ ಮ್ಯಾನೇಜ್ ಮೆಂಟ್ ಸರ್ವಿಸ್ ಎಂಬ ಕಂಪೆನಿಯನ್ನು ಸ್ಥಾಪಿಸಲಾಗಿತ್ತು ಎಂದು ಅವರು ಆರೋಪಿಸಿದ್ದರು. ಕೇವಲ ಕಾಂಟ್ರಾಕ್ಟ್ ಪಡೆಯಲಿಕ್ಕಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಲಾಗಿದೆ ಎಂದು ಸೋಮಯ್ಯ ದೂರು ನೀಡಿದ ಹಿನ್ನೆಲೆಯಲ್ಲಿ ಇಡಿ ತನಿಖೆ ಆರಂಭಿಸಿತ್ತು.