ಈಜಿಪ್ಟ್ ಮತ್ತು ಅಲ್ಜೀರಿಯಾದಲ್ಲಿ ಎರಡನೇ ಅರಬ್ ಕ್ರಾಂತಿ ಸಂಭವ: ಅರಬ್ ರಾಷ್ಟ್ರಗಳಲ್ಲಿ ಊಹೆ, ಶಂಕೆ, ಭವಿಷ್ಯ ನುಡಿಗಳ ಕಲರವ

0
604

ಕನ್ನಡಕ್ಕೆ: ಆಯಿಷತುಲ್ ಅಫೀಫಾ

ಈಜಿಪ್ಟ್ ಬುದ್ಧಿಜೀವಿಗಳು ಮತ್ತು ಪತ್ರಕರ್ತರು ಎರಡನೇ ಅರಬ್ ಕ್ರಾಂತಿಯನ್ನು ಏಕಾಏಕಿ ಊಹಿಸಿದ್ದಾರೆ. ಅವರು ನಿರ್ದಿಷ್ಟವಾಗಿ ಸುಡಾನ್ ಮತ್ತು ಅಲ್ಜೇರಿಯಾ ಚಳುವಳಿಗಳನ್ನು ಹೊಗಳಿದ್ದಾರೆ ಮತ್ತು ಸಾಮಾಜಿಕ ಮಾಧ್ಯಮ ಜಾಲತಾಣಗಳ ಮೂಲಕ ಒತ್ತು ನೀಡುತ್ತಿದ್ದಾರೆ, ಅರಬ್ ಕ್ರಾಂತಿಯ ಮೊದಲ ತರಂಗವು ಕಂಡುಬಂದ ದೇಶಗಳಲ್ಲಿ ಹರಡಿದ ದಬ್ಬಾಳಿಕೆ ನೀತಿಗಳಿಂದ ಅಂತಿಮವಾಗಿ ಹೊಸ ಕ್ರಾಂತಿಗಳು ಉಂಟಾಗುತ್ತವೆ. ಪ್ರತಿಭಟನೆಗಳನ್ನು ನಿಷೇಧಿಸುವ ಕಾನೂನನ್ನು ಹೊಂದಿರುವ ಈಜಿಪ್ಟ್ ನಂತಹ ಅರಬ್ ದೇಶಗಳಲ್ಲಿ ಎಚ್ಚರಿಕೆಯ ಗಂಟೆಗಳನ್ನು ಬಾರಿಸತ್ತಿದೆ.

ರಾಜಕೀಯ ವಿಜ್ಞಾನದ ಪ್ರೊಫೆಸರ್ ಡಾ. ಹಸನ್ ನಾಫಾ ಅವರು ಹೀಗೆಂದು ಟ್ವೀಟ್ ಮಾಡಿದ್ದಾರೆ- ಅರಬ್ ಕ್ರಾಂತಿಯ ಎರಡನೇ ತರಂಗವು ಈಗಾಗಲೇ ಆರಂಭವಾಗಿದೆ. ಆದರೆ ಈ ಬಾರಿ ಸುಡಾನ್ ನಿಂದ ಪ್ರಾರಂಭವಾಗಿದೆ ಎಂದು ತೋರುತ್ತದೆ. ಆಲ್ಜೀರಿಯಾ ಬದಲಾವಣೆಗೆ ತಯಾರಾಗುತ್ತಿದೆ ಮತ್ತು ಇತರ ಅರಬ್ ರಾಷ್ಟ್ರಗಳು ಅದನ್ನು ಅನುಸರಿಸಬಹುದು. ಅರಬ್ ಜನರು ದಬ್ಬಾಳಿಕೆ ಮತ್ತು ಸಾಮಾಜಿಕ ಅನ್ಯಾಯಕ್ಕೆ ಶರಣಾಗುವುದಿಲ್ಲವೆಂದು ಸ್ಪಷ್ಟವಾಗುತ್ತಿದೆ. ಬದಲಾವಣೆಯ ಶಕ್ತಿಗಳು ಮೊದಲ ಕ್ರಾಂತಿಯಿಂದ ಪಾಠಗಳನ್ನು ಕಲಿಯಬಹುದೆಂದು ನಾವು ಆಶಿಸುತ್ತೇವೆ.

ಅರಬ್ ಕ್ರಾಂತಿಯ ಸ್ಫೂರ್ತಿ ಈಗಲೂ ಜಗಮಗಿಸುತ್ತಿದೆ ಮತ್ತು ಇದು ಈ ಸಮಯದಲ್ಲಿ ಹೆಚ್ಚು ವ್ಯಾಪಕವಾಗಲಿದೆ ಎಂದು ಈಜಿಪ್ಟ್ ನ್ಯಾಶನಲ್ ಫ್ರಂಟ್ ನ ಪ್ರಮುಖ ಮತ್ತು ಬರಹಗಾರ ಹಾಗೂ ಮುಸ್ಲಿಂ ಬ್ರದರ್ಹುಡ್ ನ ಪ್ರತಿನಿಧಿ ಕುತುಬ್ ಅಲ್-ಅರಬಿ ಅವರು ತಮ್ಮ ಫೇಸ್ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ಕವಿ ಅಬ್ದುಲ್ ರಹಮಾನ್ ಯೂಸುಫ್ ಹೀಗೆ ಟ್ವೀಟ್ ಮಾಡಿದ್ದಾರೆ- :”ಅಲ್ಜೇರಿಯಾ ಜನರು ಉದಯಿಸುತ್ತಿದ್ದಾರೆ. ನೀವು ಅರಬ್ ಕ್ರಾಂತಿಯ ಜನರನ್ನು ಹೆದರಿಸಲು ಎಷ್ಟೇ ಪ್ರತ್ನಿಸಿದರೂ ರಾಷ್ಟ್ರವನ್ನು ಸ್ವತಂತ್ರಗೊಳಿಸಲಾಗುವುದು. ನಾವು ಸೋಲಿಸಲ್ಪಟ್ಟಿದ್ದೇವೆಂದು ನೀವು ಭಾವಿಸಿದರೂ ನಾವು ವಿಜಯ ಸಾಧಿಸುತ್ತೇವೆ. ನೀವು ಏನೇ ಮಾಡಿದರೂ ಕ್ರಾಂತಿಯ ಕೆಲವು ಯುವ ಜನರು ಹತಾಶರಾದರೂ ಹೊಸ ಭರವಸೆ ಇದ್ದೇ ಇರುತ್ತದೆ..

ಮಾಜಿ ಉಪಾಧ್ಯಕ್ಷ ಮೊಹಮದ್ ಎಲ್-ಬರಾಡಿಯವರು ಈಜಿಪ್ಟ್ ಅನ್ನು ದಬ್ಬಾಳಿಕೆಯಿಂದ ಮತ್ತು ಅದರ ಪರಿಣಾಮವಾಗಿ ಉಂಟಾದ ಅನ್ಯಾಯದಿಂದ ರಕ್ಷಿಸಲು ತುರ್ತು ರಾಷ್ಟ್ರೀಯ ಯೋಜನೆಯನ್ನು ಕಾರ್ಯಗತಗೊಳಿಸಲು ಕ್ರಮ ಕೈಗೊಳ್ಳುವಂತೆ ಟ್ವೀಟ್ ನಲ್ಲಿ ಹಲವಾರು ಕರೆ ನೀಡಿದ್ದಾರೆ.

ಚಳುವಳಿಗಾರ ಖಲೀದ್ ಮನ್ಸೂರ್ ಹೇಳಿದ್ದಾರೆ- ಆಲ್ಜೀರಿಯಾದಲ್ಲಿ ಏನು ನಡೆಯುತ್ತಿದೆ ಎಂಬುದು ಎಲ್ಲಾ ದೇಶಗಳಿಗೂ ಪಾಠವಾಗಿದೆ.

ಖಾಲ್ದ್ ಮನ್ಸೂರ್ ಅವರ ಫೇಸ್ಬುಕ್ ಪುಟದ ಪೋಸ್ಟ್ ಹೀಗಿದೆ: “ಅಲ್ಜೇರಿಯಾ ಜನರು ಶಾಂತ ಮತ್ತು ಸ್ತಬ್ದರಾಗಿದ್ದರು, ಮತ್ತು ತನ್ನ ಕೋಪವನ್ನು ತಡೆಹಿಡಿದಿದ್ದರು, ಸಂಪೂರ್ಣ ಅಲ್ಜೇರಿಯಾ ಜನರನ್ನು ಜಗತ್ತಿಗೆ ಮೂರ್ಖರಂತೆ ತೋರಿಸುತ್ತ, ಒಂದು ಅಭೂತಪೂರ್ವ ಸನ್ನಿವೇಶದಲ್ಲಿ ಅಧ್ಯಕ್ಷ ಬೊಟೆಫ್ಲಿಕಾ ಇತ್ತೀಚಿಗೆ ತನ್ನ ವೀಲ್ಚೇರ್ನಲ್ಲಿ ಕುಳಿತು ಹೊಸ ಅವಧಿಗೆ ತನ್ನ ಉಮೇದುವಾರಿಕೆಯನ್ನು ಘೋಷಿಸಲು ನಿರ್ಜೀವ ಅಸ್ಥಿಪಂಜರದಂತೆ ಕಾಣಿಸಿಕೊಂಡರು, ಪರಿಣಾಮವಾಗಿ, ಅಲ್ಜೇರಿಯಾ ಸಾರ್ವಜನಿಕರು ಕೆರಳಿದರು ಮತ್ತು ಕೋಪಗೊಂಡ ಲಕ್ಷಾಂತರ ನಾಗರಿಕರು ಕಿಕ್ಕಿರಿದ ಬೀದಿಗಳಲ್ಲಿ ತೆರಳಿದರು.

ಅಲ್ ಜಝೀರಾ ಟಿವಿ ನಿರೂಪಕ ಮೊಹಮದ್ ಮಹೆರ್ ಅಕ್ಲ್ ಅವರು ಸುಡಾನ್ ಮತ್ತು ಅಲ್ಜೇರಿಯಾ ಚಳವಳಿಯನ್ನು ಅರಬ್ ಪ್ರಪಂಚದಲ್ಲಿ “ದುಷ್ಟಗದ್ದುಗೆಯ ಮುಖಕ್ಕೆ ಹೊಡೆತ ಎಂದು ವಿವರಿಸಿದ್ದಾರೆ.

ಅಲ್ಜೇರಿಯಾ ಮತ್ತು ಸುಡಾನಿಗಳ ಪ್ರತಿಕ್ರಿಯೆ ಹೊಸ ಭರವಸೆಯನ್ನು ಉಂಟುಮಾಡಿದೆ. ವಿಶೇಷವಾಗಿ ಈಜಿಪ್ಟಿಯನ್ನರಿಗೆ ಹೇಳುವುದೇನೆಂದರೆ: “ಇನ್ನೂ ಭರವಸೆ ಇದೆ” ಎಂದು ಅಕ್ಲ್ ಹೇಳಿದರು.

ಕೃಪೆ: ಮಿಡ್ಲ್ ಈಸ್ಟ್ ಮಾನಿಟರ್