ಟ್ವಿಟರ್‌ ಹ್ಯಾಕ್| 20 ಕೋಟಿ ಬಳಕೆದಾರರ ಇ-ಮೇಲ್ ಮಾಹಿತಿ ಸೋರಿಕೆ: ವರದಿ

0
174

ಸನ್ಮಾರ್ಗ ವಾರ್ತೆ

ಲಂಡನ್: ಟ್ವಿಟರ್‌ನ 20 ಕೋಟಿ ಬಳಕೆದಾರರ ಮಾಹಿತಿ ಸೋರಿಕೆಯಾಗಿರುವುದಾಗಿ ವರದಿಯಾಗಿದೆ. ಹ್ಯಾಕರ್‌ಗಳು ಇ-ಮೇಲ್ ವಿಳಾಸಗಳನ್ನು ಕದ್ದಿದ್ದಾರೆ ಎಂದು ಆನ್‌ಲೈನ್ ಭದ್ರತೆಯ ಕುರಿತು ಸಂಶೋಧನೆ ನಡೆಸುವ ಸಂಸ್ಥೆಗಳು ಮಾಹಿತಿಯನ್ನು ಬಿಡುಗಡೆ ಮಾಡಿವೆ.

ಇಸ್ರೇಲಿ ಸೈಬರ್ ಸೆಕ್ಯುರಿಟಿ ವಾಚ್‌ಡಾಗ್ ಹಡ್ಸನ್ ರಾಕ್ ಪ್ರಕಾರ, ಮಾಹಿತಿ ಸೋರಿಕೆಯು ಹ್ಯಾಕಿಂಗ್, ಫಿಶಿಂಗ್ ಮತ್ತು ಡಾಕ್ಸಿಂಗ್‌ಗೆ ಕಾರಣವಾಗಬಹುದು. ಇದು ಇತ್ತೀಚಿನ ದಿನಗಳಲ್ಲಿ ಸಂಭವಿಸಿದ ಅತಿದೊಡ್ಡ ಮಾಹಿತಿ ಸೋರಿಕೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.

ಈ ವರದಿಗಳ ಬಗ್ಗೆ ಟ್ವಿಟರ್ ಇದುವರೆಗೆ ಪ್ರತಿಕ್ರಿಯಿಸಿಲ್ಲ. ಈ ನಿಟ್ಟಿನಲ್ಲಿ ಟ್ವಿಟರ್ ತನಿಖೆ ನಡೆಸಲಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಹ್ಯಾಕರ್‌ಗಳ ಕುರಿತಾಗಲಿ ಅಥವಾ ಅವರ ಸ್ಥಳದ ಬಗ್ಗೆಯಾಗಲಿ ಮಾಹಿತಿ ಲಭ್ಯವಿಲ್ಲ. ಎಲಾನ್ ಮಸ್ಕ್ ಟ್ವಿಟರ್ ಖರೀದಿಸುವ ಮೊದಲೇ ಹ್ಯಾಕಿಂಗ್ ಆಗಿತ್ತೆಂದು ಹೇಳಲಾಗುತ್ತಿದೆ.