ಲೂಧಿಯಾನ ಕೋರ್ಟ್ ನಲ್ಲಿ ಸ್ಫೋಟ ಪ್ರಕರಣ: ಜರ್ಮನಿಯಲ್ಲಿ ಓರ್ವನ ಬಂಧನ

0
423

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಲೂಧಿಯಾನದ ಕೋರ್ಟಿನಲ್ಲಿ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದ ಒಬ್ಬ ಶಂಕಿನನ್ನು ಜರ್ಮನಿಯಲ್ಲಿ ಬಂಧಿಸಲಾಗಿದೆ. ಸಿಕ್ಸ್ ಫಾರ್ ಜಸ್ಟಿಸ್ ಎಂಬ ಭಯೋತ್ಪಾದಕ ಸಂಘಟನೆಯ ಪ್ರಮುಖ ಜಸ್ವಿಂದರ್ ಸಿಂಗ್ ಮುಲ್ತಾನಿ ಎಂಬಾತನನ್ನು ಜರ್ಮನಿಯ ಪೊಲೀಸರು ಬಂಧಿಸಿದ್ದಾರೆ. ನಿಷೇಧಿತ ಸಿಖ್ ಸಂಘಟನೆಯ ಇಬ್ಬರು ಆರೋಪಿಗಳು ಪಾಕಿಸ್ತಾನ ಮತ್ತು ಜರ್ಮನಿಯಲ್ಲಿ ವಾಸಿಸುತ್ತಿರುವುದು ತನಿಖೆಯಲ್ಲಿ ಪತ್ತೆಯಾಗಿತ್ತು ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.

ಈಗ ಬಬ್ಬರ್ ಖಾಲ್ಸ ಭಯೋತ್ಪಾದಕ ಹರ್‍ವೀಂದರ್ ಸಿಂಗ್ ಸಂಧು ಪಾಕಿಸ್ತಾನದಲ್ಲಿದ್ದಾನೆ. ಸಿಕ್ಸ್ ಫಾರ್ ಜಸ್ಟಿಸ್ ಉನ್ನತ ಸದಸ್ಯ ಮತ್ತು ಜರ್ಮನಿ ನಿವಾಸಿ ಗುರ್‍ಪತ್ ಸಿಂಗ್ ಪನ್ನು ಅವರ ಅನುಯಾಯಿ ಜಸ್ವಿಂದರ್ ಸಿಂಗ್ ಮುಲ್ತಾನಿ. ಇವರಿಗೆ ಲುಧಿಯಾನ ಸ್ಫೋಟದಲ್ಲಿ ಪಾತ್ರ ಇದೆ ಎಂದು ಗುಪ್ತಚರ ಸಂಸ್ಥೆ ಮುನ್ನೆಚ್ಚರಿಕೆ ನೀಡಿತ್ತು.

ಭಯೋತ್ಪಾದನೆಗೆ ಸಂಚು ನಡೆಸಿದ ಆರೋಪದಲ್ಲಿ ಮುಲ್ತಾನಿಯನ್ನು ಏರ್‍ಪರ್‍ಟ್ ನಗರದಿಂದ ಜರ್ಮನಿ ಪೊಲೀಸರು ಬಂಧಿಸಿದ್ದಾರೆ. ಮುಲ್ತಾನಿಯ ವಿಚಾರಣೆಗೆ ಭಾರತದ ಪೊಲೀಸರು ಜರ್ಮನಿಗೆ ಹೋಗಲಿದ್ದಾರೆ. ಡಿಸೆಂಬರ್ 23ಕ್ಕೆ ಲುಧಿಯಾನ ಕೋರ್ಟ್ ಸಮುಚ್ಚಯದಲ್ಲಿ ನಡೆದ ಸ್ಫೋಟದಲ್ಲಿ ಒಬ್ಬರು ಮೃತಪಟ್ಟಿದ್ದರು ಮತ್ತು ಇಬ್ಬರು ಗಾಯಗೊಂಡಿದ್ದರು.