ಎಸಿ ಕೆಲಸ ಮಾಡದ ಐಸಿಯುವನ್ನು ನೋಡಿದ್ದೀರಾ? ಇದು ಮಧ್ಯಪ್ರದೇಶದ ಸರಕಾರಿ ಆಸ್ಪತ್ರೆಯ ಅವಸ್ಥೆ

0
106

ಸನ್ಮಾರ್ಗ ವಾರ್ತೆ

ಎಸಿ ಕೆಲಸ ಮಾಡದ ಐಸಿಯುವನ್ನು ನೋಡಿದ್ದೀರಾ? ಮಧ್ಯಪ್ರದೇಶದ ಸರಕಾರಿ ಆಸ್ಪತ್ರೆಯಿಂದ ಇಂಥದ್ದೊಂದು ವಿಡಿಯೋ ಹೊರ ಬಿದ್ದಿದೆ. ತಿಂಗಳಿನಿಂದ ಈ ಸರಕಾರಿ ಆಸ್ಪತ್ರೆಯ ಐಸಿಯುನಲ್ಲಿ ಎಸಿ ಕೆಲಸ ಮಾಡುತ್ತಿಲ್ಲ. ಕಾಯಿಲೆ ಪೀಡಿತರೇ ಐಸಿಯು ಗೆ ಫ್ಯಾನ್ ತಂದಿರುವ ಚಿತ್ರ ಮತ್ತು ವಿಡಿಯೋ ವೈರಲ್ ಆಗಿದೆ.

ಕಳೆದ ನಾಲ್ಕು ತಿಂಗಳಿಂದ ಇದೇ ಪರಿಸ್ಥಿತಿಯಾಗಿದೆ ಎಂದು ಕಾಯಿಲೆ ಪೀಡಿತರ ಸಂಬಂಧಿಕರು ಹೇಳಿದ್ದಾರೆ. ಮಧ್ಯಪ್ರದೇಶದ ಆರೋಗ್ಯ ಸಚಿವರ ಗಮನಕ್ಕೆ ಈ ಮಾಹಿತಿಯನ್ನು ತಂದಾಗ ಸರಕಾರದಲ್ಲಿ ಹಣವಿಲ್ಲ ಎಂದು ಹೇಳಿರುವುದಾಗಿ ವರದಿಯಾಗಿದೆ.

ಇದೇ ವೇಳೆ ಮಧ್ಯಪ್ರದೇಶದ ಆರೋಗ್ಯ ಕ್ಷೇತ್ರದ ಪರಿಸ್ಥಿತಿ ತೀರ ಹದಗೆಟ್ಟಿದೆ. ಆದ್ದರಿಂದ 30,000 ಉದ್ಯೋಗಿಗಳನ್ನು ತಕ್ಷಣ ಆಯ್ಕೆ ಮಾಡಲಾಗುವುದು ಎಂದು ಸರ್ಕಾರ ತಿಳಿಸಿದೆ. ಇಲ್ಲಿಯ ಆರೋಗ್ಯ ಕ್ಷೇತ್ರದ ಹೊಣೆಯನ್ನು ಉಪಮುಖ್ಯಮಂತ್ರಿ ರಾಜೇಂದ್ರ ಶುಕ್ಲ ಅವರು ವಹಿಸಿಕೊಂಡಿದ್ದಾರೆ.