ತೃಣಮೂಲ ಕಾಂಗ್ರೆಸ್‍ಗೆ ಸೇರಿದ ಮೂರು ತಿಂಗಳಲ್ಲೇ ರಾಜೀನಾಮೆ: ಬಿಜೆಪಿಗಿಂತಲೂ ಕೆಟ್ಟ ಕೋಮುವಾದಿ ಪಾರ್ಟಿ ಎಂದ ಗೋವಾ ಮಾಜಿ ಶಾಸಕ

0
253

ಸನ್ಮಾರ್ಗ ವಾರ್ತೆ

ಪಣಜಿ: ತೃಣಮೂಲ ಕಾಂಗ್ರೆಸ್‍ಗೆ ಸೇರಿ ಮೂರೇ ತಿಂಗಳಲ್ಲಿ ಗೋವದ ಮಾಜಿ ಶಾಸಕ ಲಾವು ಮಾಮಲೇದಾರ್ ರಾಜೀನಾಮೆ ನೀಡಿದ್ದಾರೆ. ತೃಣಮೂಲ ಕಾಂಗ್ರೆಸ್ ಕೋಮುವಾದಿ ಪಾರ್ಟಿ ವಿಧಾನಸಭೆಯ ಮೊದಲು ಮತಕ್ಕಾಗಿ ಹಿಂದೂ ಕ್ರೈಸ್ತರಲ್ಲಿ ಪರಸ್ಪರ ಒಡಕು ಮೂಡಿಸಲು ಅದು ಯತ್ನಿಸುತ್ತಿದೆ ಎಂದು ಅವರು ಆರೋಪಿಸಿದರು. ಅವರು ಪೊಂಡದ ಮಾಜಿ ಶಾಸಕರಾಗಿದ್ದು ಸೆಪ್ಟಂಬರಿನಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‍ಗೆ ಸೇರಿದ್ದರು.

ಪಶ್ಚಿಮ ಬಂಗಾಳ ವಿಧಾನಸಭಾ ಗೆಲುವನ್ನು ನೋಡಿ ಆಕರ್ಷಿತನಾಗಿ ತೃಣಮೂಲ ಕಾಂಗ್ರೆಸ್‍ಗೆ ಸೇರ್ಪಡೆಯಾಗಿದ್ದೆ. ತೃಣಮೂಲ ಜಾತ್ಯತೀತ ಪಾರ್ಟಿ ಎಂಬ ವಿಶ್ವಾಸ ಇತ್ತು. ಆದರೆ ಹದಿನೈದು ಇಪ್ಪತ್ತು ದಿನಗಳಿಂದ ನೋಡುತ್ತಾ ಬರುತ್ತಿದ್ದೇನೆ. ಇದು ಬಿಜೆಪಿಗಿಂತಲೂ ಕೆಟ್ಟ ಪಾರ್ಟಿಯಾಗಿದೆ ಎಂಬುದು ಮನವರಿಕೆಯಾಗಿದೆ ಎಂದು ಲಾವು ಹೇಳಿದರು.

ಗೋವಾದ ಹಿಂದೂ ಕ್ರೈಸ್ತ ಮತದಾರರನ್ನು ವಿಭಜಿಸಲು ತೃಣಮೂಲ ಕಾಂಗ್ರೆಸ್ ಶ್ರಮಿಸುತ್ತಿದೆ. ಟಿಎಂಸಿ ಮಹಾರಾಷ್ಟ್ರವಾದಿ ಗೋಮಾಂತಕ ಪಾರ್ಟಿಯೊಂದಿಗೆ ಸಖ್ಯ ಮಾಡಿಕೊಂಡಿರುವುದು ಇದಕ್ಕಾಗಿದೆ. ಕ್ರೈಸ್ತ ಮತಗಳನ್ನು ತೃಣಮೂಲ ಕಾಂಗ್ರೆಸ್ಸಿಗೂ ಹಿಂದೂ ಮತಗಳನ್ನು ಎಂಜಿಪಿಗೂ ಕೇಂದ್ರೀಕರಿಸುವ ಯತ್ನ ಇದು. ಟಿಎಂಸಿ ಒಂದು ಕೋಮುವಾದಿ ಪಾರ್ಟಿಯಾಗಿದೆ. ಆದುದರಿಂದ ಜಾತ್ಯತೀತ ಮೌಲ್ಯಗಳನ್ನು ನಾಶಪಡಿಸಲು ಅವರು ಶ್ರಮಿಸುತ್ತಿದ್ದಾರೆ. ಗೃಹಲಕ್ಷ್ಮಿ ಯೋಜನೆಯ ಹೆಸರಿನಲ್ಲಿ ವೈಯಕ್ತಿಕ ವಿವರಗಳನ್ನು ಸಂಗ್ರಹಿಸುವುದು ತೃಣಮೂಲ ಕಾಂಗ್ರೆಸ್ಸಿನ ಯತ್ನವಾಗಿದೆ. ಪಶ್ಚಿಮ ಬಂಗಾಳದಲ್ಲಿ ತೃಣಮೂಲ ತಲಾ 500 ರೂಪಾಯಿ ಕೊಟ್ಟಿದೆ. ಇಲ್ಲಿ 5000 ರೂಪಾಯಿ ಕೊಡಲಾಗುವುದು ಎಂದು ಹೇಳುತ್ತಿದೆ. ಇದು ಅಸಾಧ್ಯ ಎಂದು ಲಾವು ಹೇಳಿದರು.