ರಾಯಚೂರು: ಜಿ.ಕೆ ಡಯಾಗ್ನೋಸ್ಟಿಕ್ ಲ್ಯಾಬ್ ವತಿಯಿಂದ ರೀಮ್ಸ್ ಆಸ್ಪತ್ರೆಗೆ 100 ಫೇಸ್ ಶೀಲ್ಡ್ ಮಾಸ್ಕ್ ವಿತರಣೆ

0
535

ಸನ್ಮಾರ್ಗ ವಾರ್ತೆ

ರಾಯಚೂರು,ಮೇ.15: ನಗರದ ಪ್ರತಿಷ್ಠಿತ ರಕ್ತ ಪರೀಕ್ಷಾ ಕೇಂದ್ರವಾದ ಜಿ.ಕೆ ಡಯಾಗ್ನೋಸ್ಟಿಕ್ ಲ್ಯಾಬೋರೇಟರಿ ಇದರ ರಜತ ಮಹೋತ್ಸವದ (25 ವರ್ಷದ) ಸಂಭ್ರಮಾಚರಣೆಯ ಪ್ರಯುಕ್ತ ರಾಯಚೂರು ವೈದ್ಯಕೀಯ ಶಿಕ್ಷಣ ಸಂಸ್ಥೆ ರಿಮ್ಸ್ ಮೆಡಿಕಲ್ ಕಾಲೇಜ್‌ಗೆ 100 ಫೇಸ್ ಶೀಲ್ಡ್ ಮಾಸ್ಕ್ ಗಳನ್ನು ಉಚಿತವಾಗಿ ವಿತರಿಸಲಾಯಿತು ಹಾಗೂ ನಗರದ ವಿವಿಧ ನರ್ಸಿಂಗ್ ಹೋಮ್‌ಗಳಿಗೆ ಮತ್ತು ವೈದ್ಯರಿಗೆ ಮಾಸ್ಕ್‌ಗಳನ್ನು ವಿತರಿಸಲಾಯಿತು.

ದೇಶದಲ್ಲಿ ದಿನೇದಿನೇ ಕೊರೋನ ಸೋಂಕು ಹೆಚ್ಚಾಗುತ್ತಿದ್ದು ಸಾರ್ವಜನಿಕರು ಮುಂಜಾಗ್ರತಾ ಕ್ರಮಗಳನ್ನು ವಹಿಸಿಕೊಳ್ಳಬೇಕು, ಅಗತ್ಯವಿದ್ದಾಗ ಮಾತ್ರ ಮನೆಯಿಂದ ಹೊರುವ ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕಿದೆ.

ಕೊರೋನಾ ವೈರಸ್ ವಿರುದ್ಧ ಹಗಲಿರುಳೆನ್ನದೇ ಆರೋಗ್ಯ ಸಿಬ್ಬಂದಿಗಳು ಮತ್ತು ಜಿಲ್ಲಾ ಆಡಳಿತ ಹಾಗೂ ಕೊರೋನ ವಾರಿಯರ್ಸ್ ಹೋರಾಡುತ್ತಿದ್ದು, ನಾವೆಲ್ಲರೂ ಅವರಿಗೆ ಸಹಕರಿಸಬೇಕಾಗಿದೆ ಎಂದು ಜಿ.ಕೆ.ಡಯಾಗ್ನಸ್ಟಿಕ್ ಲ್ಯಾಬೋರೇಟರಿಯ ಮಾಲಿಕರು ಹಾಗೂ ಹಿರಿಯ ಟೆಕ್ನೋಲಜಿಸ್ಟ್ ಆದ ಎಂ.ಎ.ಅಝೀಜ್ ಮುಜಾಹಿದ್ ರವರು ಹೇಳಿದರು.