ತುರ್ಕಿಯ ಖ್ಯಾತ ಇಸ್ಲಾಮಿಕ್ ವಿದ್ವಾಂಸ ಫತ್ಹುಲ್ಲಾ ಗುಲಾನ್ ನಿಧನ

0
126

ಸನ್ಮಾರ್ಗ ವಾರ್ತೆ

ಖ್ಯಾತ ಇಸ್ಲಾಮಿಕ್ ಪಂಡಿತ ಫತ್ಹುಲ್ಲಾ ಗುಲಾನ್ ನಿಧನರಾಗಿದ್ದಾರೆ. 83 ವರ್ಷದ ಇವರು ಅಮೆರಿಕಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 1999 ರಿಂದಲೇ ಅವರು ಅಮೆರಿಕದಲ್ಲಿ ನೆಲೆಸಿದ್ದಾರೆ. 2016ರ ಸೇನಾ ಬುಡಮೇಲು ಕೃತ್ಯದಲ್ಲಿ ಇವರ ಪಾತ್ರ ಇದೆ ಎಂದು ತುರ್ಕಿ ಆರೋಪಿಸುತ್ತಾ ಬಂದಿದೆ.

ಇದಕ್ಕಿಂತ ಮೊದಲು 1999ರಲ್ಲಿ ಇವರ ಮೇಲೆ ಇನ್ನೊಂದು ಪ್ರಕರಣ ದಾಖಲಾಗಿತ್ತು. ತುರ್ಕಿಯ ಸೆಕ್ಯುಲರ್ ಸ್ವರೂಪವನ್ನು ಬದಲಿಸುವುದಕ್ಕೆ ಇವರು ಸಂಚು ನಡೆಸಿದ್ದಾರೆ ಎಂಬ ಆರೋಪವನ್ನು ಹೊರಿಸಲಾಗಿತ್ತು. ಆ ಬಳಿಕ ಅವರು ಚಿಕಿತ್ಸೆಯ ನೆಪದಲ್ಲಿ ಅಮೆರಿಕಕ್ಕೆ ಪಲಾಯನ ಮಾಡಿದ್ದರು.

2002ರಲ್ಲಿ ತುರ್ಕಿ ಅಧ್ಯಕ್ಷ ಉರ್ದುಗಾನ್ ಅವರ ಪಕ್ಷದ ಪ್ರಮುಖ ಮೈತ್ರಿ ಪಕ್ಷವಾಗಿ ಇವರ ಹಿಸ್ಮತ್ ಪಕ್ಷ ಗುರುತಿಸಿಕೊಂಡಿತ್ತು. ಉರ್ದುಗಾನ್ ಮತ್ತು ಅವರ ಏಕೆ ಪಕ್ಷದೊಂದಿಗೆ ಗುಲಾನ್ ಅವರಿಗೆ ಬಹಳ ಒಳ್ಳೆಯ ಸಂಬಂಧ ಇತ್ತು. 2013ರಲ್ಲಿ ಇವರಿಬ್ಬರ ನಡುವೆ ಮನಸ್ತಾಪ ಉಂಟಾಗಿ ಇಬ್ಬರೂ ಬೇರ್ಪಟ್ಟರು.

ತುರ್ಕಿಯಲ್ಲೂ ಮತ್ತು ತುರ್ಕಿಗಿಂತ ಹೊರಗೂ ಅತ್ಯಂತ ಪ್ರಮುಖ ಇಸ್ಲಾಮಿಕ್ ಸಂಘಟನೆಯಾಗಿ ಹಿಸ್ಮತ್ ಗುರುತಿಸಿಕೊಂಡಿದೆ. ಆ ಬಳಿಕ ಉರ್ದುಗಾನ್ ಸರಕಾರವನ್ನು ಬುಡ ಮೇಲುಗೊಳಿಸುವುದಕ್ಕೆ ಈ ಹಿಸ್ಮತ್ ಪಕ್ಷ ಪ್ರಯತ್ನ ನಡೆಸಿದೆ ಎಂಬ ಆರೋಪ ಬಂತು. ಆದರೆ ಗುಲಾನ್ ಅವರು ಈ ಆರೋಪವನ್ನು ಒಪ್ಪಿಕೊಂಡಿಲ್ಲ.