ಯುದ್ಧ ಭೀತಿ; ಅಮೇರಿಕಾ ಸಹಿತ ವಿವಿಧ ರಾಷ್ಟ್ರಗಳಿಂದ ಲೆಬನಾನ್ ಪ್ರಯಾಣಕ್ಕೆ ತಡೆ

0
263

ಸನ್ಮಾರ್ಗ ವಾರ್ತೆ

ಇಸ್ರೇಲ್ ಮತ್ತು ಫೆಲಸ್ತೀನ್ ನಡುವಿನ ಸಂಘರ್ಷವು ಇದೀಗ ಲೆಬನಾನ್ ಗೆ ವ್ಯಾಪಿಸುವ ಎಲ್ಲಾ ಸಾಧ್ಯತೆಗಳೂ ಕಾಣಿಸುತ್ತಿವೆ. ಈ ಹಿನ್ನೆಲೆಯಲ್ಲಿ ಲೆಬನಾನ್ ಪ್ರಯಾಣಕ್ಕೆ ಅಮೆರಿಕ ಸಹಿತ ವಿವಿಧ ರಾಷ್ಟ್ರಗಳು ತಡೆ ಹೇರಿವೆ. ದಕ್ಷಿಣ ಲೆಬನಾನ್ ನಿಂದ ಇಸ್ರೇಲ್ ನ ಕೇಂದ್ರಗಳಿಗೆ ಹಿಝ್ಬುಲ್ಲ 30 ಮಿಸೈಲ್ ಗಳನ್ನು ಹಾರಿಸಿದೆ ಎಂದು ವರದಿಯಾಗಿದೆ.

ಇದೇ ವೇಳೆ ಕೆಂಪು ಸಮುದ್ರದಲ್ಲಿ ಎರಡು ಹಡಗುಗಳ ಮೇಲೆ ಯಮನನಿನ ಹೂತಿಗಳು ದಾಳಿ ನಡೆಸಿದ್ದಾರೆ. ಹಿಸ್ಬುಲ್ಲಾ ಹಾರಿಸಿದ ಮಿಸೈಲ್ ಗಳಿಂದ ಇಸ್ರೇಲಿ ಪ್ರದೇಶಗಳಲ್ಲಿ ಬೆಂಕಿ ಹತ್ತಿಕೊಂಡಿದೆ ಎಂದು ವರದಿಯಾಗಿದೆ.

ಗಾಜಾದ ನಿರಾಶ್ರಿತ ಶಿಬಿರದ ಮೇಲೆ ಸೈನಿಕ ಕಾರ್ಯಾಚರಣೆಗೆ ಬಂದ ಇಸ್ರೇಲಿ ಸೇನೆಯ ಕಮಾಂಡರ್ ಬಾಂಬು ಸ್ಫೋಟಕ್ಕೆ ಬಲಿಯಾಗಿದ್ದಾರೆ. ರಸ್ತೆ ಬದಿಯಲ್ಲಿ ಹೂತಿಟ್ಟಿದ್ದ ಬಾಂಬ್ ಸೈನಿಕರ ಮೇಲೆ ಸಿಡಿದಿದ್ದು 16 ಮಂದಿ ಸೈನಿಕರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.