ಉಳ್ಳಾಲ: ಜಗತ್ತು ಮುಂದುವರಿದಂತೆ ಶೈಕ್ಷಣಿಕ ಕ್ಷೇತ್ರಗಳು ಹೆಚ್ಚಾಗುತ್ತಿವೆ. ಇದರಿಂದ ಶಿಕ್ಷಿತರ ಸಂಖ್ಯೆಯೂ ಹೆಚ್ಚಾಗುತ್ತಿವೆ. ಇದು ಸಾಮಾಜಿಕ, ವೈಜ್ಞಾನಿಕ, ಆರ್ಥಿಕ ಮುಂತಾದ ರಂಗಗಳಲ್ಲಿ ಪ್ರಗತಿ ಸಾಧಿಸಲು ಕಾರಣವಾಗುತ್ತಿದೆ. ಆದರೆ ಮನುಷ್ಯರನ್ನು ಮನುಷ್ಯರಂತೆ ಕಾಣಲು ಶಿಕ್ಷಿತರಿಗೆ ಸಾಧ್ಯವಾಗುತ್ತಿಲ್ಲ. ಈ ಕೊರತೆಯನ್ನು ಬಿ.ಐ.ಇ. ನೀಗಿಸುತ್ತದೆ ಎಂದು ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ ಕರ್ನಾಟಕ ಇದರ ಕಾರ್ಯದರ್ಶಿ ರಿಯಾಝ್ ಅಹ್ಮದ್ ರೋಣ ಹೇಳಿದರು. ಅವರು ಇತ್ತೀಚೆಗೆ ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ ಉಳ್ಳಾಲ ಸೆಂಟರ್ ವತಿಯಿಂದ ಕಲ್ಲಾಪುವಿನ ಯುನಿಟಿ ಮಿನಿ ಹಾಲ್ನಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮದ ಅಧ್ಯ ಕ್ಷತೆ ವಹಿಸಿ ಮಾತನಾಡುತ್ತಿದ್ದರು. ಮುಂದುವರಿದು ಮಾತನಾಡಿದ ಅವರು, ನಮ್ಮ ಮಕ್ಕಳಲ್ಲಿ ಹೋಮ್ ವರ್ಕ್ ಬಗ್ಗೆ ಮಾತ್ರ ವಿಚಾರಿಸದೇ ಇತರರಿಗೆ ನೆರವಾದ ಬಗ್ಗೆಯೂ ವಿಚಾರಿಸುತ್ತಿರ ಬೇಕು ಎಂದು ಕಿವಿಮಾತು ಹೇಳಿದರು.
ಮಂಗಳೂರು ವಿವಿ ಗ್ರಾಜುವೆಟ್ ಸ್ಟಡೀಸ್ ಮತ್ತು ರಿಸರ್ಚ್ ಕಂಪ್ಯೂಟರ್ ಸೈನ್ಸ್ನ ಪ್ರೊಫೆಸರ್ ಡಾ. ದೊರೆಸ್ವಾಮಿ ಮಾತಾಡಿ, ಧರ್ಮ ಮತ್ತು ಸಮಾಜ ಇವೆರಡನ್ನು ಅರ್ಥಮಾಡಿಕೊಂಡು ಜೀವಿಸಿದರೆ ಮಾತ್ರ ಮಾನವನ ಜೀವನದಲ್ಲಿ ಉದಾರತೆ ಕಾಣಲು ಸಾಧ್ಯ. ಮಾನವನ ಬೆಳವಣಿಗೆಗೆ ಶಿಕ್ಷಣ ಸಹಕಾರ ನೀಡುತ್ತದೆ.ಆ ಕೆಲಸವನ್ನು ಬೋರ್ಡ್ ಆಫ್ ಇಸ್ಲಾಮಿಕ್ ಕರ್ನಾಟಕ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಮದನಿ ಪಿಯು ಕಾಲೇಜು ಪ್ರಾಶುಪಾಲ ಇಸ್ಮಾಯಿಲ್ ಟಿ. ಮಾತನಾಡಿ, ಕೇವಲ ಲೌಕಿಕ ಶಿಕ್ಷಣದ ಜತೆಗೆ ಪದವಿ ಪಡೆದುಕೊಂಡರೆ ಶಿಕ್ಷಣ ಪೂರ್ತಿ ಯಾಗುವುದಿಲ್ಲ. ಬೋರ್ಡ್ ಆಫ್ ಇಸ್ಲಾಮಿಕ್ ಎಜ್ಯುಕೇಶನ್ ಹಮ್ಮಿಕೊಂಡಿರುವ ಐದು ವರ್ಷದ ಕೋರ್ಸ್ ವಿದ್ಯಾರ್ಥಿಗಳಲ್ಲಿ ಬಹಳಷ್ಟು ಬದಲಾವಣೆ ತರಲು ಸಾಧ್ಯ. ಮದ್ರಸ ಶಿಕ್ಷಣಕ್ಕಿಂತಲೂ ಬೋರ್ಡ್ ಇಸ್ಲಾಮಿಕ್ ಎಜ್ಯುಕೇ ಶನ್ ನೀಡುವ ಶಿಕ್ಷಣ ವಿದ್ಯಾರ್ಥಿಗಳಲ್ಲಿ ಜ್ಞಾನಾಭಿವೃದ್ಧಿ ಬೆಳೆಸುತ್ತದೆ ಎಂದರು.
ಹಿರಾ ಕಾಲೇಜು ಉಪನ್ಯಾಸಕಿ ಮಂಜುಳಾ, ಜಮಾಅತೆ ಇಸ್ಲಾವಿೂ ಹಿಂದ್ ಮಂಗಳೂರು ಸ್ಥಾನೀಯ ಅಧ್ಯಕ್ಷ ಕೆ.ಎಂ. ಅಶ್ರಫ್ ಮಾತನಾಡಿ ದರು. ಈ ಸಂದರ್ಭ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ನಡುಪದವು ಪಿ.ಎ. ಫಾರ್ಮಸಿ ಕಾಲೇಜಿನ ಉಪನ್ಯಾಸಕ ಡಾ| ಮುಹಮ್ಮದ್ ಮುಬೀನ್ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು.
ವೇದಿಕೆಯಲ್ಲಿ ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ ಉಳ್ಳಾಲ ಸಂಚಾಲಕ ಅಬ್ದುರ್ರಹೀಮ್, ಜಮಾಅತೆ ಇಸ್ಲಾಮೀ ಹಿಂದ್ ಉಳ್ಳಾಲ ಸ್ಥಾನೀಯ ಅಧ್ಯಕ್ಷ ಯು.ಎ. ಅಬ್ದುಲ್ ಕರೀಮ್, ಎಸ್.ಐ.ಓ. ಉಳ್ಳಾಲದ ಅಧ್ಯಕ್ಷ ನಿಝಾಮ್ ಹಾಗೂ ಜಿ.ಐ.ಓ. ಉಳ್ಳಾಲದ ಅಧ್ಯಕ್ಷೆ ಎಂ. ಸೌದರವರು ಉಪಸ್ಥಿತರಿದ್ದರು.
ಆರಂಭದಲ್ಲಿ ಬೋರ್ಡ್ ವಿದ್ಯಾರ್ಥಿ ಮಾಹಿಝ್ ಉಮರ್ ಕುರ್ಆನ್ ಪಠಿಸಿದರು. ಮುಝಮ್ಮಿಲ್ ಅಹ್ಮದ್ ಕಾರ್ಯಕ್ರಮ ನಿರೂಪಿಸಿ ಧನ್ಯವಾದಗೈದರು.












