ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಆ. 14: ಪಾಕಿಸ್ತಾನದ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕಾಗಿ ಗಾಯಕ ಮಿಖಾ ಸಿಂಗ್ರಿಗೆ ಸಿನೆಮಾ ಸಂಘಟನೆ ನಿಷೇಧ ಹೇರಿದೆ. ಕರಾಚಿಯ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕಾಗಿ ಮಿಖಾ ಸಿಂಗ್ರಿಗೆ ನಿಷೇಧ ಹೇರಿರುವುದಾಗಿ ಆಲ್ ಇಂಡಿಯ ಸಿನಿಮಾ ವರ್ಕರ್ಸ್ ಅಸೋಸಿಯೇಶನ್ನ ಹೇಳಿಕೆ ತಿಳಿಸಿದೆ.
ಎಲ್ಲ ಮ್ಯೂಸಿಕ್ ಕಾಂಟ್ರಾಕ್ಟ್ಗಳಿಂದ ಮಿಖಾರನ್ನು ಕೈಬಿಡಲಾಗುವುದು. ಸಿನೆಮಾದಲ್ಲಿ, ಸಂಗೀತ ಅಲ್ಬಮ್ಗಳಲ್ಲಿ, ಆನ್ಲೈನ್ ಮ್ಯೂಸಿಕ್ಗಳಲ್ಲಿ ಭಾಗವಹಿಸುವುದಕ್ಕೂ ನಿಷೇಧವನ್ನು ಅಸೋಸಿಯೇಶನ್ ಹೇರಿದೆ.
ಕರಾಚಿಯಲ್ಲಿ ಪಾಕಿಸ್ತಾನದ ಮಾಜಿ ಅಧ್ಯಕ್ಷ ಫರ್ವೇಝ್ ಮುಶರ್ರಫ್ರ ಸಂಬಂಧಿಕರು ಆಯೋಜಿಸಿದ್ದ ಸಂಗೀತ ಕೂಟದಲ್ಲಿ ಮಿಖಾ ಸಿಂಗ್ ಭಾಗವಹಿಸಿದ್ದರು. ಮಿಖಾ ಸಿಂಗ್ ದೇಶದ ಗೌರವಕ್ಕಿಂತ ಹಣಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದಾರೆ. ಎರಡು ದೇಶಗಳ ನಡುವೆ ಸಾಮರಸ್ಯವಿಲ್ಲ. ಮಾತ್ರವಲ್ಲ ಅಸೋಸಿಯೇಶನ್ನ ತೀರ್ಮಾನಗಳನ್ನು ಉಲ್ಲಂಘಿಸಿ ಅವರು ಪಾಕಿಸ್ತಾನದ ಕಾರ್ಯಕ್ರಮಕ್ಕೆ ಹೋಗಿದ್ದಾರೆ. ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಆಲ್ ಇಂಡಿಯಾ ಸಿನೆಮಾ ವರ್ಕರ್ಸ್ ಅಸೋಸಿಯೇಶನ್ ಅಧ್ಯಕ್ಷ ಸುರೇಶ್ ಶ್ಯಾಮಲ್ ಗುಪ್ತಾ ತಿಳಿಸಿದರು.












