ಧರ್ಮ ನಿಂದನೆ ಟ್ವೀಟ್: ಟ್ವಿಟರ್ ಸಿಇಒ ವಿರುದ್ಧ ಬೆಂಗಳೂರಿನಲ್ಲಿ ಕೇಸು

0
617

ಸನ್ಮಾರ್ಗ ವಾರ್ತೆ

ಬೆಂಗಳೂರು,ಡಿ.31: ಧರ್ಮ ನಿಂದನೆಯನ್ನು ಪ್ರಚಾರ ಮಾಡಲಾಗಿದೆ ಎಂದು ಆರೋಪಿಸಿ ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತರೊಬ್ಬರು ಟ್ವಿಟರ್ ಸಿಇಒ ಮತ್ತು ಟ್ವಿಟರ್ ಇಂಡಿಯಾದ ಮಾ ಜಿನಿರ್ದೇಶಕರ ವಿರುದ್ಧ ಬೆಂಗಳೂರಿನ ಕೆಆರ್‌ಪುರಂ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದಾರೆ.

ಕೆನಡದ ಅಮನ್ ನವಾಬಿ ಟ್ವಿಟರ್‌ನಲ್ಲಿ ಹಿಂದೂ, ಕ್ರೈಸ್ತ, ಮುಸ್ಲಿಂ ವಿಶ್ವಾಸಗಳಿಗೆ ಹಾನಿಯಾಗುವ ರೀತಿಯಲ್ಲಿ ಟ್ವೀಟ್ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಹಾಗೂ ದೇವ ವಿಶ್ವಾಸ ಕೆಟ್ಟದೆಂದು ಟ್ವೀಟ್ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಟ್ವಿಟರ್ ಸಿಇಒ ಜಾಕಿ ಡೊರ್ಸಿ, ಟ್ವಿಟರ್ ಇಂಡಿಯಾದ ಮಾಜಿ ನಿರ್ದೇಶಕಿ ಮಹಿಮಾ ಕೌಲ್, ಮನೀಶ್ ಮಹೇಶ್ವರಿ, ಮಾಯ ಹರಿ ವಿರುದ್ಧ ಕೇಸು ದಾಖಲಾಗಿದೆ. ಎತಿಸ್ಟ್ ರಿಪಬ್ಲಿಕ್ ಪಬ್ಲಿಸೈಸ್ ಎಂಬ ಟ್ವಿಟರ್ ಹ್ಯಾಂಡಲ್‍ನಿಂದ ಅರ್‍ಮಿನ್ ನವಾಬಿ ಟ್ವೀಟ್‍ಗಳು ಬರುತ್ತಿದೆ. ಟ್ವೀಟ್ ವಿರುದ್ಧ ಟ್ವಿಟರ್ ಅಧಿಕಾರಿಗಳಿಗೆ ಪತ್ರ ಬರೆದರೂ ಒಂದು ದಿವಸ ಮಾತ್ರ ನವಾಬಿಯನ್ನು ಬ್ಲಾಕ್ ಮಾಡಲಾಗಿತ್ತು. ಕೆನಡದಲ್ಲಿ ಈತನ ಟ್ವೀಟ್‍ಗಳನ್ನು ಧರ್ಮ ನಿಂದೆ ಎಂದು ಪರಿಗಣಿಸುವುದಿಲ್ಲ ಎಂಬ ಮುನ್ನೆಚ್ಚರಿಕೆ ನೆಲೆಯಲ್ಲಿ ಒಂದು ದಿನ ಬ್ಲಾಕ್ ಮಾಡಲಾಗಿದೆ ಎಂದು ಟ್ವಿಟರ್ ಅಧಿಕಾರಿಗಳು ಹೇಳಿದ್ದರು.