ರೋಹಿಂಗ್ಯನ್ ನಿರಾಶ್ರಿತರ ಶಿಬಿರದಲ್ಲಿ ಕೊರೋನಾ: ಪರಿಸ್ಥಿತಿ ದಯನೀಯವಾಗಬಹುದೆಂದು ಎಚ್ಚರಿಸಿದ ವಿಶ್ವಸಂಸ್ಥೆ

0
384

ಸನ್ಮಾರ್ಗ ವಾರ್ತೆ

ಕಾಕ್ಸ್ ಬಝಾರ್,ಮೇ15: ಲಕ್ಷಾಂತರ ರೋಹಿಂಗ್ಯನ್ ಮುಸ್ಲಿಮರ ವಾಸ ಕೇಂದ್ರವಾದ ದಕ್ಷಿಣ ಬಾಂಗ್ಲಾದೇಶದ ನಿರಾಶ್ರಿತರ ಶಿಬಿರದಲ್ಲಿ ಕೊರೋನಾ ದೃಢೀಕರಣವಾಗಿದೆ. ಈ ಕ್ಯಾಂಪ್‍ನಲ್ಲಿ ಮೊದಲ ಕೊರೋನಾ ವೈರಸ್ ಬಾಧೆ ದೃಢಪಟ್ಟಿದೆ.

ನಿರಾಶ್ರಿತರ ಶಿಬಿರಗಳಿಗೆ ಕೊರೋನಾ ಬಂದರೆ ಲಕ್ಷಾಂತರ ರೋಹಿಂಗ್ಯನ್ನರ ಪರಿಸ್ಥಿತಿ ಹೆಚ್ಚು ದಯಾನೀಯವಾಗಲಿದೆ ಎಂದು ವಿಶ್ವ ಆರೋಗ್ಯ ಸಂಘಟನೆ ಮುನ್ನೆಚ್ಚರಿಕೆ ನೀಡಿದೆ. ಕೊರೋನಾ ದೃಢಪಟ್ಟಿರುವ ಇಬ್ಬರನ್ನು ಐಸೊಲೇಶನ್ ನಲ್ಲಿರಿಸಲಾಗಿದೆ. ಬಾಂಗ್ಲಾದೇಶದಲ್ಲಿ 18,863 ಮಂದಿಗೆ ಕೊರೊನಾ ಬಾಧಿಸಿದ್ದು, 283 ಮಂದಿ ಮೃತಪಟ್ಟಿದ್ದಾರೆ.

ರೋಗ ವ್ಯಾಪಿಸದಂತೆ ತಡೆಯಲು ಮಾರ್ಚ್ 26ರಿಂದ ಬಾಂಗ್ಲಾದೇಶದಲ್ಲಿ ಲಾಕ್‌ಡೌನ್ ಜಾರಿಯಲ್ಲಿದೆ. ಎಪ್ರಿಲ್‍ನಲ್ಲಿ ಕಾಕ್ಸ್ ಬಝಾರಿನಿಂದ ಕೊರೋನಾ ಪತ್ತೆಯಾದ ಬಳಿಕ ಜಿಲ್ಲೆಯಲ್ಲಿ ಕಠಿಣ ಕ್ರಮಗಳನ್ನು ಜಾರಿಗೊಳಿಸಲಾಗಿದ್ದು, ಕ್ಯಾಂಪಿಗಿರುವ ವಾಹನ ಸಂಚಾರವನ್ನು ನಿಲ್ಲಿಸಲಾಗಿದೆ.

ಶಿಬಿರದಲ್ಲಿ ಕಾರ್ಯಪ್ರವೃತ್ತ ಸ್ವಯಂಸೇವಕರ ಸಂಖ್ಯೆ ಕಡಿತ ಮಾಡಲು ಸೂಚನೆ ಹೊರಡಿಸಲಾಗಿದೆ. ಸುಮಾರು 60,000-90,000 ಕ್ಕೂ ಹೆಚ್ಚು ರೋಹಿಂಗ್ಯನ್ನರಿಗೆ ಸರಿಯಾದ ಸೌಕರ್ಯಗಳೂ ಇಲ್ಲ. ಅವರು ಕಾಕ್ಸ್ ಬಝಾರಿನ ಶಿಬಿರದಲ್ಲಿ ಕಿಕ್ಕಿರಿದು ವಾಸಿಸುತ್ತಿದ್ದಾರೆ.