ನೀಟ್ ಸೂಪರ್ ಸ್ಪೆಷಾಲಿಟಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಗಳಿಸಿದ ಡಾ. ಮಕ್ತುಮ್ ನಾಯಕ್ ಗೆ ಸೋಲಿಡಾರಿಟಿಯಿಂದ ಸನ್ಮಾನ

0
279

ಸನ್ಮಾರ್ಗ ವಾರ್ತೆ

ಸಿಂಧನೂರು: ಮಸ್ಕಿ ತಾಲೂಕಿನ ಬಳಗಾನೂರ ಪಟ್ಟಣದ ರೈತ ಮೋಹಿನ್ ಸಾಬ್ ನಾಯಕ್ ಇವರ ಪುತ್ರ ಡಾ. ಮಕ್ತುಮ್ ನಾಯಕ್ ವೈದ್ಯಕೀಯ ಕ್ಷೇತ್ರದ ನೀಟ್ ಸೂಪರ್ ಸ್ಪೆಷಾಲಿಟಿ ಪರೀಕ್ಷೆ ಯಲ್ಲಿ ರಾಷ್ಟ್ರಕ್ಕೆ 3ನೇ ರ‍್ಯಾಂಕ್ ಮತ್ತು ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಪಡೆದ ಯುವ ಸಾಧಕ ಡಾ. ಮಕ್ತುಮ್ ನಾಯಕ್ ನಿಗೆ ಸೋಲಿಡಾರಿಟಿ ಯೂತ್ ಮೂಮೆಂಟ್, ಸಿಂಧನೂರು ಘಟಕದ ವತಿಯಿಂದ ಅಭಿನಂದನಾ ಸಮಾರಂಭವನ್ನು ಮಸ್ಜಿದ್ ಏನ ಹುದಾದ ಸ್ವಾಲಿಡಾರಿಟಿ ಯೂತ್ ಮೂಮೆಂಟ್ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಈ ಅಭಿನಂದನಾ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ನಗರದ ಖ್ಯಾತ ಸರ್ಜನ್ ಡಾ.ಬಿ.ಎನ್. ಪಾಟೀಲ್ ಭಾಗವಹಿಸಿ ಡಾ. ಮಕ್ತುಮ್ ನಾಯಕ್ ಅವರ ಸಾಧನೆಯನ್ನು ಶ್ಲಾಘಿಸಿ, ಗ್ರಾಮಿಣ ಭಾಗದ ಈ ಯುವ ವೈದ್ಯನ ಸೇವೆ ನಮ್ಮ ಭಾಗದ ಜನರಿಗೆ ದೊರೆಯುಂತಾಗಲಿ ಮತ್ತು ಮುಂದೆ ಹೆಚ್ಚಿನ ಯಶಸ್ಸು ಸಿಗಲೆಂದು ಹಾರೈಸಿದರು.

ಇದೇ ಸಮಯದಲ್ಲಿ ನಗರದ ವಿವಿಧ ಸಂಘಟನೆಯವರಿಂದ ಡಾ.ಮಕ್ತುಮ್ ನಾಯಕ್ ಅವರಿಗೆ ಶಾಲು ಹಾಕಿ ಸನ್ಮಾನಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿಂಧನೂರಿನ ಜಮಾಅತೆ ಇಸ್ಲಾಮೀ ಹಿಂದ್ ಅಧ್ಯಕ್ಷರಾದ ಜನಾಬ್ ಮುಹಮ್ಮದ್ ಹುಸೇನ್ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಜಾಫರ್ ಅಲಿ ಜಾಗಿರ್ ದಾರ್ , ರಹೀಮ್ ಸಾಬ್ ಮೆಕ್ಯಾನಿಕ್ ,ಅಬ್ದುಲ್ ಸಮದ್ ಚೌದರಿ, ಶೇಕ್ಷಾ ಖಾದ್ರಿ, ಸೋಲಿಡಾರಿಟಿ ಯೂತ್ ಮೂಮೆಂಟ್, ಸಿಂಧನೂರು ಅಧ್ಯಕ್ಷ ಡಾ ವಸೀಮ್ ಅಹಮದ್ ಸೇರಿದಂತೆ ಇತರರು ಭಾಗವಹಿಸಿದ್ದರು.