ಸುಡಾನ್‍ನಲ್ಲಿ ವಿದ್ಯಾರ್ಥಿ ಜಾಥಾದ ಮೇಲೆ ಗುಂಡು: ಐವರ ಸಾವು

0
390

ಕರ್ತೂಂ, ಜು. 30: ಸುಡಾನಿನಲ್ಲಿ ವಿದ್ಯಾರ್ಥಿಗಳ ನೇತೃತ್ವದಲ್ಲಿ ನಡೆದ ರಾಲಿಯ ಮೇಲೆ ಗುಂಡು ಹಾರಾಟ ನಡೆಸಿದ ಪರಿಣಾಮ ಐವರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಸೋಮವಾರ ಉತ್ತರ ಸುಡಾನಿನ ಕೊರ್ದೊಫೋನ್ ಪ್ರಾಂತದಲ್ಲಿ ಘಟನೆ ನಡೆದಿದೆ. ಅಲ್ ಉಬೈದ್ ಎಂಬಲ್ಲಿ ವಿದ್ಯಾರ್ಥಿಗಳು ಪ್ರತಿಭಟನಾ ರಾಲಿ ಹಮ್ಮಿಕೊಂಡಿದ್ದರು. ರಾಲಿಯ ಮೇಲೆ ಅಡಗಿ ಕೂತ ಅಜ್ಞಾತರು ಗುಂಡು ಹಾರಿಸಿದ್ದಾರೆಂದು ವರದಿ ತಿಳಿಸಿದೆ.

ಹಲವಾರು ಮಂದಿ ಗಾಯಗೊಂಡಿದ್ದು ಇವರಲ್ಲಿ ಹಲವರ ಆರೋಗ್ಯ ಸ್ಥಿತಿ ಚಿಂತಾನಜನಕವಾಗಿದೆ ಎಂದು ಸುಡಾನ್ ಡಾಕ್ಟರ್ಸ್ ಕಮಿಟಿಯನ್ನು ಉದ್ಧರಿಸಿ ವರದಿಯಾಗಿದೆ. ಮೃತರಲ್ಲಿ ನಾಲ್ವರು ವಿದ್ಯಾರ್ಥಿಗಳು ಎನ್ನಲಾಗಿದೆ. ಸುಡಾನ್‍ನಲ್ಲಿ ಆಳ್ವಿಕೆಯಲ್ಲಿರುವ ಮಿಲಿಟರಿ ಕೌನ್ಸಿಲ್ ವಿರುದ್ಧ ವಿದ್ಯಾರ್ಥಿಗಳು ರಾಲಿಯಲ್ಲಿ ಘೋಷಣೆ ಕೂಗುತ್ತಿದ್ದರು. ಸೇನೆಯೇ ವಿದ್ಯಾರ್ಥಿಗಳ ಮೇಲೆ ಗುಂಡು ಹಾರಿಸಿದೆ ಎಂದು ವರದಿಯೊಂದು ತಿಳಿಸಿದೆ.