ಸನ್ಮಾರ್ಗ ವಾರ್ತೆ
ಪ್ರಯಾಣದ ಸಮಯದಲ್ಲಿ ಕೆಲವೊಮ್ಮೆ ಕಾಯ್ದಿರಿಸಿದ ರೈಲ್ವೆ ಟಿಕೆಟ್ ಗಳನ್ನು ಮನೆಯಲ್ಲಿ ಅಥವಾ ನಿಲ್ದಾಣದಲ್ಲಿ ಮರೆತು ಬಿಡುವವರಿಗೆ ಈ ಸುದ್ದಿ. ಇದೀಗ ರೈಲ್ವೆ ಹೊಸ ನಿಯಮದ ಪ್ರಕಾರ ನೀವು ನಿಮ್ಮ ಟಿಕೆಟ್ ತೆಗೆದುಕೊಳ್ಳುವಲ್ಲಿ ಮರೆತರೂ ನೀವು ಯಾವುದೇ ದಂಡ ಅಥವಾ ತೊಂದರೆಗಳಿಲ್ಲದೆ ನಿಮ್ಮ ಪ್ರಯಾಣವನ್ನು ಮುಂದುವರಿಸಬಹುದು.
ನಿಮ್ಮ ಕುಟುಂಬ ಸದಸ್ಯರು ಅಥವಾ ಇತರರು ದಂಡಪಾವತಿಸದೆ ಅಥವಾ ನಕಲಿ ಟಿಕೆಟ್ ಪಡೆಯದೆ ರೈಲು ಹೊರಡುವ ನಿಲ್ದಾಣದಲ್ಲಿ ಸ್ಟೇಷನ್ ಮಾಸ್ಟರ್ ಗೆ ಮೂಲ ಟಿಕೆಟ್ ಅನ್ನು ತೋರಿಸುವ ಮೂಲಕ ತಮ್ಮ ಪ್ರಯಾಣವನ್ನು ಮುಂದುವರಿಸಬಹುದು. ಟಿಕೆಟ್ ಪರಿಶೀಲಿಸಿ ದೃಢಪಡಿಸಿದ ನಂತರ ಸ್ಟೇಷನ್ ಮಾಸ್ಟರ್ ಈ ಮಾಹಿತಿಯನ್ನು ಅಸ್ತಿತ್ವದಲ್ಲಿರುವ ನಿಯಮಗಳ ಪ್ರಕಾರ ರೈಲು ಮಾರ್ಗದಲ್ಲಿರುವ ಹತ್ತಿರದ ನಿಲ್ದಾಣಕ್ಕೆ ತಲುಪಿಸುತ್ತಾರೆ. ಈ ರೀತಿಯಾಗಿ ನೀವು ಯಾವುದೇ ತೊಂದರೆಗಳಿಲ್ಲದೆ ನಿಮ್ಮ ಪ್ರಯಾಣವನ್ನು ಮುಂದುವರಿಸಬಹುದು.
ನೀವು ಟಿಕೆಟ್ ತೆಗೆದುಕೊಳ್ಳಲು ಮರೆತರೆ , ಮೊದಲು ರೈಲಿನಲ್ಲಿರುವ ಪ್ರಯಾಣ ಟಿಕೆಟ್ ಪರೀಕ್ಷಕರಿಗೆ ತಿಳಿಸಬೇಕು. ನಂತರ ಕುಟುಂಬ ಸದಸ್ಯರಿಗೆ ಮೂಲ ಟಿಕೆಟ್ ಅನ್ನು ಸಾಧ್ಯವಾದಷ್ಟು ಬೇಗ ನಿರ್ಗಮನ ನಿಲ್ದಾಣದಲ್ಲಿರುವ ಸ್ಟೇಷನ್ ಮಾಸ್ಟರ್ ಗೆ ತೋರಿಸಲು ಸೂಚಿಸಬೇಕು.
ಈ ನಿಯಮವು ಐಆರ್ಸಿಟಿಸಿ ಮೂಲಕ ಆನ್ಲೈನ್ನಲ್ಲಿ ಬುಕ್ ಮಾಡಿದ ಇ ಟಿಕೆಟ್ ಗಳಿಗೆ ಅನ್ವಯಿಸುವುದಿಲ್ಲ.












