ದಾರುಲ್ ಹಸನಿಯಾ ಅಕಾಡೆಮಿ ಜುಬೈಲ್ ಘಟಕ ರಚನೆ

0
290

ಸನ್ಮಾರ್ಗ ವಾರ್ತೆ

ಜುಬೈಲ್ : ಸಾಲ್ಮರ ದಾರುಲ್ ಹಸನಿಯಾ ಅಕಾಡೆಮಿಯ ಸೌದಿ ಅರೇಬಿಯಾದ ಜುಬೈಲ್ ನ ನೂತನ ಘಟಕವನ್ನು ಜುಬೈಲ್ ಕ್ಲಾಸಿಕ್ ರೆಸ್ಟೋರೆಂಟ್ ಸಭಾಂಗಣದಲ್ಲಿ ಸೇರಿದ ಸ್ನೇಹ ಸಂಗಮದಲ್ಲಿ ರಚಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಫಾರೂಕ್ ಹಾಜಿ ಪೋರ್ಟ್ ವೆ ಅವರು ದಾರುಲ್ ಹಸನಿಯಾ ಸಂಸ್ಥೆಯ ಪ್ರಗತಿಗಾಗಿ ಕೈಜೋಡಿಸುವಂತೆ ಕರೆ ನೀಡಿದರು.
ಸಯ್ಯದ್ ಅಹ್ಮದ್ ತಂಙಳ್ ಪ್ರಾರ್ಥನೆ ನಡೆಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಸ್ಥೆಯ ಪ್ರಚಾರ ವಕ್ತಾರರಾದ ಅನ್ವರ್ ಸಾದಾತ್ ಉಸ್ತಾದ್ ಮೊಟ್ಟೆತಡ್ಕ ಅವರು, ಅನಿವಾಸಿ ಉದ್ಯಮಿಯಾಗಿದ್ದ ಮರ್ಹೂಂ ಹಾರಿಸ್ ಹಾಜಿ ದರ್ಬೆ ರವರ ಅವಿರತ ಶ್ರಮದ ಮೂಲಕ ದಾರುಲ್ ಹಸನಿಯಾ ಸಂಸ್ಥೆಗೆ ವಿಶಾಲವಾದ ಜಮೀನನ್ನು ಖರೀದಿಸಲು ಸಾಧ್ಯವಾಯಿತು. ಸಂಸ್ಥೆಯನ್ನು ಬೃಹತ್ತಾಗಿ ಕಟ್ಟಬೇಕೆಂಬ ಕನಸು ಅವರಲ್ಲಿತ್ತು. ಆದರೆ ಅವರು ನಮ್ಮೊಂದಿಗಿಲ್ಲ, ಅಲ್ಲಾಹನ ವಿಧಿ ನಿರ್ಣಯದಂತೆ ನಮ್ಮಿಂದ ಅಗಲಿದ್ದಾರೆ, ಅದರೆ ಅವರಿಗೆ ಪುಣ್ಯಫಲ ಖಂಡಿತಾ ದೊರಕುತ್ತದೆ ಎಂದರು.

ಸಂಸ್ಥೆಯನ್ನು ಬೃಹತ್ತಾಗಿ ಕಟ್ಟಲು ಅನಿವಾಸಿ ಮಿತ್ರರ ಸಹಕಾರ ಖಂಡಿತಾ ಅಗತ್ಯವಿದೆ ಅದಕ್ಕಾಗಿ ಜುಬೈಲ್ ನಿಂದ ಆರಂಭಗೊಂಡು, ದಮ್ಮಾಮ್ ರಿಯಾದ್,ಬುರೈದಾ ಇನ್ನಿತರ ಕಡೆ ಕಮಿಟಿಯನ್ನು ರಚಿಸಬೇಕಿದೆ ಸರ್ವರ ಸಹಕಾರವಿರಲಿ ಎಂದು ಮನವಿ ಮಾಡಿದರು.

ಅತಿಥಿಯಾಗಿ ಆಗಮಿಸಿದ್ದ ಸಾಲ್ಮರ ಸಯ್ಯದ್ ಮಲೆ ಜಮಾಅತ್ ಕಮಿಟಿಯ ಅಧ್ಯಕ್ಷರು ಅಬ್ದುಲ್ ಹಮೀದ್ ಸಾಲ್ಮರ ರವರು ಮಾತನಾಡಿ, ನಮ್ಮ ಪುತ್ತೂರು ಪರಿಸರದ ಎಲ್ಲಾ ಅನಿವಾಸಿ ಮಿತ್ರರು ದಾರುಲ್ ಹಸನಿಯಾದ ಕಟ್ಟಡ ನಿರ್ಮಾಣ ಕ್ಕೆ ಸಹಕರಿಸುವಂತೆ ಕರೆ ನೀಡಿದರು.

ಸಮಾರಂಭದಲ್ಲಿ ಅನಿವಾಸಿ ಉದ್ಯಮಿಗಳಾದ ಫೈರೋಝ್ ಹಾಜಿ ,ತ್ವಾಹಿರ್ ಸಾಲ್ಮರ, ಮುನೀರ್ ಹಾಜಿ ಮೊದಲಾದವರು ಮಾತನಾಡಿ, ದಾರುಲ್ ಹಸನಿಯಾದ ಬೆಳವಣಿಗೆಯಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು. ಸಮಾರಂಭದಲ್ಲಿ ಅತಿಥಿಯಾಗಿ ಬಶೀರ್ ಹಾಜಿ ದರ್ಬೆ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ದಾರುಲ್ ಹಸನಿಯಾ ಅಕಾಡೆಮಿಯ ನೂತನ ಜುಬೈಲ್ ಘಟಕವನ್ನು ರಚಿಸಲಾಯಿತು. ಸಮಿತಿಯ ಪದಾಧಿಕಾರಿಗಳಾಗಿ ಈ ಕೆಳಗಿನವರನ್ನು ಆರಿಸಲಾಯಿತು.

ಗೌರವ ಸಲಹೆಗಾರರಾಗಿ ಫಾರೂಕ್ ಹಾಜಿ ಪೋರ್ಟ್ ವೆ, ಗೌರವ ಅಧ್ಯಕ್ಷರಾಗಿ ಮುನೀರ್ ಹಾಜಿ ಬೈರಿಕಟ್ಟೆ, ಅಧ್ಯಕ್ಷರಾಗಿ ಫೈರೊಝ್ ಹಾಜಿ ಪರ್ಲಡ್ಕ ಕೆ.ಎಸ್.ಎ.
ಉಪಾಧ್ಯಕ್ಷರಾಗಿ ತಹ್ ಸೀರ್ ದರ್ಬೆ, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ನಿಝಾರ್ ಸಾಮೆತ್ತಡ್ಕ,
ಜೊತೆ ಕಾರ್ಯದರ್ಶಿಯಾಗಿ ಆಸಿಫ್ ಬಪ್ಪಳಿಗೆ, ಫಹದ್ ದರ್ಬೆ ಮತ್ತು ಉದೈಪ್ ಕೊರಿಂಗಿಲ, ಕೋಶಾಧಿಕಾರಿಯಾಗಿ ಆಸಿಫ್ ಹಾಜಿ ದರ್ಬೆ, ಪತ್ರಿಕಾ ಕಾರ್ಯದರ್ಶಿಯಾಗಿ ಮುಸ್ತಾಕ್ ಕೋಡಿಯಾಡಿ ಮತ್ತು ರಹ್ಮಾನ್ KSA, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸಯ್ಯದ್ ಅಹ್ಮದ್ ತಂಙಲ್, ಅಬ್ದುಲ್‌ ಲತೀಫ್ ಹಾಜಿ ಮರಕ್ಕನಿ, ತ್ವಾಹಿರ್ ಸಾಲ್ಮರ, ನಿಝಾರ್ ಆರಂಡ ಬೆಳ್ಳಾರೆ, ಇಕ್ಬಾಲ್ ಕುಂತೂರು, ಝಿಯಾದ್ ಹಾಜಿ ದರ್ಬೆ, ಮುಹಮ್ಮದ್ ಸುಹಾಗ್, ಸತ್ತಾರ್ ಕೆ.ಪಿ‌. ಸಹಝ್, ಹಾರಿಸ್ ಬೆಳ್ಳಾರೆ, ಸಫಾ ಇಸ್ಮಾಯಿಲ್, ಇಸ್ಮಾಯಿಲ್ ಹಾಜಿ ಕೆಮ್ಮಿಂಜೆ, ಸುಹೈಲ್ ಕೋಡಿಯಾಡಿ , ಅಶ್ರಫ್ ಹಾಜಿ ಮುಕ್ವೆ ಹಾಗೂ ಸದಸ್ಯರುಗಳಾಗಿ ಜಸೀಂ ಎಂ.ಕೆ, ನುಹ್ಮಾನ್ ಕನ್ಯಾನ, ಮುಹಾಝ್ ಹುಸೈನ್, ಅದನಾನ್ ಕಿನ್ಯ, ಮುಹಾಝ್,ಯೂಸುಫ್ ,ಕಲಂದರ್ ಶಾಫಿ, ನೌಶಿನ್ ಕಬಕ, ಖಲಂದರ್, ನೌಫಲ್ ಸಾಲ್ಮರ,ಶಾಹಿಲ್ ಕೆ.ಪಿ., ಖಾಲಿದ್ ಸಾಲ್ಮರ, ಅಝರ್,ನಿಝಾಂ ,ಆದಿಲ್, ಶಂಸುದ್ದೀನ್, ಹಮೀದ್, ನಹೀಂ ,ನೌಶಾದ್ ಕೆ.ಪಿ.
ಮೊದಲಾದವರನ್ನು ಆಯ್ಕೆ ಮಾಡಲಾಯಿತು, ಕಾರ್ಯಕ್ರಮದ ಆರಂಭದಲ್ಲಿ ಇಕ್ಬಾಲ್ ಕುಂತೂರು ಸ್ವಾಗತಿಸಿದರು. ನವಾಝ್ ಮುಕ್ವೆ ಕಿರಾಅತ್ ಪಠಿಸಿದರು.