ಪ.ಬಂಗಾಳ: ಈ ಬಾರಿ ದುರ್ಗಾ ಪೂಜೆಗೆ ಮಹಿಳಾ ಅರ್ಚಕಿಯರ ನೇತೃತ್ವ

0
385

ಸನ್ಮಾರ್ಗ ವಾರ್ತೆ

ಕೊಲ್ಕತಾ: ಶತಮಾನಗಳಿಂದಲೂ ಅರ್ಚಕರು ಪುರುಷರಾಗಿರಬೇಕೆಂಬ ಸಂಕಲ್ಪವನ್ನು ತಿದ್ದಿ ದುರ್ಗಾ ಪೂಜೆಯ ನೇತೃತ್ವ ವಹಿಸಲು ಕೊಲ್ಕತಾದ ನಾಲ್ವರು ಮಹಿಳೆಯರು ಮುಂದೆ ಬಂದಿದ್ದಾರೆ. ನಂದಿಮಿ, ರುಮಾ, ಸೀಮಂತಿ, ಪೌಲೊಮ ದುರ್ಗಾ ಪೂಜೆಯಲ್ಲಿ ಮುಖ್ಯ ನೃತೃತ್ವವನ್ನು ವಹಿಸಲಿದ್ದಾರೆ.

ಹತ್ತು ವರ್ಷದಿಂದ ಶುಭಮಸ್ತು ಎಂಬ ಗ್ರೂಪನ್ನು ರೂಪಿಸಿ ಸಣ್ಣ ಪೂಜೆಗಳ ಧಾರ್ಮಿಕ ಆಚಾರಗಳನ್ನು ನಾಲ್ವರು ನಡೆಸುತ್ತಿದ್ದರು. ಇವರು ದುರ್ಗಾ ಪೂಜೆಗೆ ಮೊದಲ ಸಲ ನೇತೃತ್ವವನ್ನು ವಹಿಸುತ್ತಿದ್ದಾರೆ. ಕೊಲ್ಕತಾದ 66 ದುರ್ಗಾ ಪೂಜೆ ಸಮಿತಿಯು ಮಾಡಿಸುವ ಕಾರ್ಯಕ್ರಮದಲ್ಲಿ ಇವರು ನೇತೃತ್ವ ವಹಿಸಲಿದ್ದಾರೆ.

ಸ್ಟಿರಿಯೊಟೈಪ್‍ಗಳನ್ನು ನಾಶಪಡಿಸುವುದು ನಮ್ಮ ಗುರಿಯೆಂದು ನಾವು ಭಾವಿಸಿಲ್ಲ. ಇದನ್ನು ಆರಂಭಿಸುವಾಗ ನಮ್ಮ ಮನಸ್ಸಿನಲ್ಲಿ ಹಾಗೇನಿರಲಿಲ್ಲ. ರುಮಾ ಮತ್ತು ನಾನು ಕಾಲೇಜಿನ ಸಂಸ್ಕೃತ ಅಧ್ಯಾಪಕಿಯರು. ಆದುದರಿಂದ ಹೊಸ ತಲೆಮಾರಿಗೆ ಇಂತಹ ಆಚಾರಗಳಲ್ಲಿ ಆಸಕ್ತಿಯಿದೆ ಎಂದು ನಮಗೆ ಮನವರಿಕೆಯಾಗಿತ್ತು. ಅದನ್ನು ಸರಿಯಾಗಿ ಮಾಡುತ್ತಿದ್ದೇವೆ’ ಇವರ ಕೂಟದ ಒಬ್ಬ ಸದಸ್ಯೆಯಾಗಿರುವ ನಂದಿನಿ ಹೇಳಿದರು.

ನಂದಿನಿಯ ಮಗಳ ಮದುವೆಯಲ್ಲಿ ಇವರು ಸಮಾರಂಭಕ್ಕೆ ನೇತೃತ್ವವನ್ನು ನೀಡಿದ್ದರು. ಇವರ ಪಾಲಿಗೆ ಇದು ಮೊದಲ ಕಾರ್ಯಕ್ರಮ ಆಗಿತ್ತು. ಸೀಮಂತಿ ಎಳವೆಯಿಂದಲೇ ಶಾಂತಿನಿಕೇತನದಲ್ಲಿ ಬೆಳೆದವರು ಗಾಯಕಿ ಮತ್ತು ಸಾಮಾಜಿಕ ಕಾರ್ಯಕರ್ತೆ. ಅಧ್ಯಾಪಕಿ ಮತ್ತು ಗಾಯಕಿ ಪೌಲೋಮಿ ಜೊತೆಗೆ ಸಾಮಾಜಶಾಸ್ತ್ರದಲ್ಲಿ ಮಾಸ್ಟರ್ ಡಿಗ್ರಿ ಮಾಡುತ್ತಿದ್ದಾರೆ. ಪೂಜೆ ಮಾಡುವ ಆರಂಭದಲ್ಲಿ ಎದ್ದು ವಿರೋಧಗಳನ್ನು ನಾವು ಅಭಿನಂದನೆಯಾಗಿ ಬದಲಿಸಿದೆವು ನಮ್ಮ ಕುಟುಂಬ ಪೂರ್ಣ ಸಹಕರಿಸಿದ್ದು ನಮ್ಮ ಯಶಸ್ಸಿಗೆ ಕಾರಣವಾಗಿದೆ ಎಂದು ಇವರಲ್ಲಿ ಹಿರಿಯರಾದ ಸೀಮಂತಿ ಹೇಳಿದರು.

ನಾವು ಸಾಧಾರಣ ಪುರೋಹಿತರು ಮಾತ್ರ ಮುಖ್ಯ ಪುರೋಹಿತರಲ್ಲ ಹಳೆಯ ಆಚಾರಗಳನ್ನು ಉಳಿಸಿಕೊಂಡು ಆಚಾರಗಳನ್ನು ಹೇಗೆ ನಡೆಸಿಕೊಡಬೇಕೆಂದು ಕಲಿಸುವುದು ನಮ್ಮ ಉದ್ದೇಶ ಎಂದು ಅವರು ಹೇಳಿದರು.