200 ಯುನಿಟ್ ವಿದ್ಯುತ್ ಉಚಿತ: ಕೇಜ್ರಿವಾಲ್ ಸರಕಾರದ ಮಹತ್ವದ ನಿರ್ಧಾರ

0
565

ಹೊಸದಿಲ್ಲಿ,ಆ. 1: ದಿಲ್ಲಿ ಸರಕಾರ ವಿದ್ಯುತ್ ಬಿಲ್ ನಲ್ಲಿ ರಿಯಾಯಿತಿ ಘೋಷಿಸಿದೆ. 200 ಯುನಿಟ್ ವರೆಗೆ ಬಳಕೆದಾರರಿಗೆ ವಿದ್ಯುತ್ ಉಚಿತವಾಗಿ ದಿಲ್ಲಿಯ ಆಮ್ ಆದ್ಮಿ ಸರಕಾರ ನೀಡಲಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದರು. ಮಾತ್ರವಲ್ಲ 201 ಯುನಿಟ್ ನಿಂದ 401 ಯುನಿವರೆಗೆ ವಿದ್ಯುತ್ ಉಪಯೋಗಿಸುವವರು ಬಿಲ್‍ಗಳಲ್ಲಿ ಶೇ. 50ರಷ್ಟು ಬಿಲ್ ಪಾವತಿಸಿದರೆ ಸಾಲುತ್ತದೆ.

ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದ ಕೇಜ್ರಿವಾಲ್, ವಿದ್ಯುತ್ ಸಬ್ಸಿಡಿಯನ್ನು ಘೋಷಿಸಿದರು. ವಿದ್ಯುತ್ ಬಳಕೆ 200 ಯುನಿಟ್ ಆದರೆ ಈವರೆಗೆ 622 ರೂಪಾಯಿ ಬಿಲ್ ಪಾವತಿಸಬೇಕಿತ್ತು. ನಾಳೆಯಿಂದ ಅದು ಉಚಿತ. 25೦ ಯುನಿಟ್‍ಗಿಂತ ಹೆಚ್ಚು ಉಪಯೋಗಿಸಿದರೆ 800 ರೂಪಾಯಿ ಬಿಲ್ ಪಾವತಿಸಬೇಕಾಗಿತ್ತು. ಇನ್ನು 252 ರುಪಾಯಿ ಬಿಲ್ ತೆತ್ತರೆ ಸಾಲುತ್ತದೆ. 300 ಯುನಿಟ್ ಉಪಯೋಗಿಸಿದರೆ 971 ರೂಪಾಯಿ ಬಿಲ್ ನೀಡಬೇಕಿತ್ತು. ಇನ್ನು 526 ರೂಪಾಯಿ ಬಿಲ್ ಪಾವತಿಸಿದರೆ ಸಾಲುತ್ತದೆ ಎಂದು ಮುಖ್ಯಮಂತ್ರಿ ಕೇಜ್ರಿವಾಲ್ ಹೇಳಿದರು.

ದಿಲ್ಲಿಯ ವಿಧಾನಸಭಾ ಚುನಾವಣೆಗೆ ಕೆಲವು ತಿಂಗಳು ಬಾಕಿಯಿದೆ. ಇದೇ ಸಂದರ್ಭದಲ್ಲಿ ವಿದ್ಯುತ್ ಸರಕಾರ ಸಬ್ಸಿಡಿ ಘೋಷಿಸಿದೆ. ಹಿಂದೆ ದಿಲ್ಲಿ ಮೆಟ್ರೋ ರೈಲಿನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಕೇಜ್ರಿ ಸರಕಾರ ಘೋಷಿಸಿತ್ತು.