ಮದುವೆ ಹಾಲ್ ನಿಂದ ಮದುಮಗಳು ನೇರವಾಗಿ ಪರೀಕ್ಷಾ ಹಾಲ್ ಗೆ

0
209

ಸನ್ಮಾರ್ಗ ವಾರ್ತೆ

ಮಂಗಳೂರು ವಿಶ್ವವಿದ್ಯಾನಿಲಯದ ಅಧೀನದಲ್ಲಿರುವ ಕಲ್ಲಡ್ಕ ಅನುಗ್ರಹ ಮಹಿಳಾ ಕಾಲೇಜಿನಲ್ಲಿ ಸೆಮಿಸ್ಟರ್ ಪರೀಕ್ಷೆ ನಡೆಯುತ್ತಿದ್ದು, ಈ ಕಾಲೇಜಿನ ವಿದ್ಯಾರ್ಥಿನಿಯಾದ ಬೀವಿ ಅಶೂರ, ತೃತೀಯ ಬಿಕಾಂ ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಇವತ್ತು ಜುಲೈ 01, 2024 ರಂದು ಅವರ ವಿವಾಹವಾಗಿದ್ದು, ಇದೇ ದಿನ ಮದ್ಯಾಹ್ನದ ನಂತರ ಅವರಿಗೆ ಪರೀಕ್ಷೆ ಕೂಡ ಇತ್ತು. ವಿದ್ಯಾರ್ಥಿನಿಯು ಮದುವೆ ಹಾಲ್ ನಿಂದ ನೇರವಾಗಿ ಪರೀಕ್ಷಾ ಕೇಂದ್ರಕ್ಕೆ ಬಂದು ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು.

ಪರೀಕ್ಷೆ ಬರೆಯಲು ಬಂದ ನವ ವಧುವನ್ನು ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಹೇಮಲತಾ ಹಾಗೂ ಉಪನ್ಯಾಸಕಿಯರು ಸೇರಿ ಸ್ವಾಗತಿಸಿ ಹೂಗುಚ್ಚ ನೀಡಿ ಶುಭ ಹಾರೈಸಿದರು.

ವಿದ್ಯಾರ್ಥಿನಿಯ ಈ ಮಾದರಿ ನಡೆ ಎಲ್ಲಾ ವಿದ್ಯಾರ್ಥಿಗಳಿಗೂ ಸ್ಪೂರ್ತಿದಾಯಕವಾಗಿದೆ ಎಂದು ಅಭಿನಂದಿಸಿದರು.