ಮದರಸದಂತಹ ಧಾರ್ಮಿಕ ಸಂಸ್ಥೆಗಳಿಗೆ ಸಹಾಯ: ಪರಿಶೀಲನೆ ನಡೆಸಲು ಮುಂದಾದ ಅಲಹಾಬಾದ್ ಹೈಕೋರ್ಟ್

0
478

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಮದರಸದಂತಹ ಧಾರ್ಮಿಕ ಸಂಸ್ಥೆಗಳಿಗೆ ಸರಕಾರಿ ಸಹಾಯ ನೀಡುವುದು ಸಂವಿಧಾನಿಕವಾಗಿದೆಯೇ ಎಂಬುದನ್ನು ಅಲಹಾಬಾದ್ ಹೈಕೋರ್ಟು ಪರಿಶೀಲಿಸುವುದಾಗಿ ತಿಳಿಸಿದ್ದು ಉತ್ತರಪ್ರದೇಶದ ಅನುದಾನಿತ ಮದ್ರಸಾಗಳಲ್ಲಿ ಹೊಸ ಹುದ್ದೆಗಳನ್ನು ಸೃಷ್ಟಿಸದೆ ಇರುವುದನ್ನು ಪ್ರಶ್ನಿಸಿ ಸಲ್ಲಿಸಿ ಅರ್ಜಿಯನ್ನು ಪರಿಗಣನೆಗೆ ಎತ್ತಿಕೊಂಡ ಹೈಕೋರ್ಟಿನ ಏಕಪೀಠ ಹೀಗೆ ಹೇಳಿತು.

ಮದರಸಗಳಲ್ಲಿ ಹೆಣ್ಣು ಮಕ್ಕಳಿಗೆ ಪ್ರವೇಶವಿದೆಯೇ?, ಧಾರ್ಮಿಕ ವಿದ್ಯಭ್ಯಾಸ ಸಂಸ್ಥೆಗಳಿಗೆ ರಾಜ್ಯ ಸರಕಾರ ಸಹಾಯ ನೀಡುವುದು ಸಂವಿಧಾನಿಕವಾಗಿದೆಯೇ? ಸರಕಾರಿ ಫಂಡ್ ಕೊಡುವ ಧಾರ್ಮಿಕ ಅಲ್ಪಸಂಖ್ಯಾತರು ನಡೆಸುವ ಸಂಸ್ಥೆಗಳು ಎಲ್ಲರ ಧಾರ್ಮಿಕ ವಿಶ್ವಾಸಗಳನ್ನು ರಕ್ಷಿಸುತ್ತಿದೆಯೇ? ಮಕ್ಕಳಿಗೆ ಆಟದ ಮೈದಾನವಿದೆಯೇ? ಇತ್ಯಾದಿ ವಿಷಯಗಳನ್ನು ನ್ಯಾಯಾಲಯವು ಪರಿಗಣಿಸಲಿದೆ.