ಜಿ.ಎಂ. ಶಿರಹಟ್ಟಿ ಅವರ `ಕಾಬಾದ ನೆರಳಿನಲ್ಲಿ’ ಕೃತಿ ಬಿಡುಗಡೆ

0
207

ಸನ್ಮಾರ್ಗ ವಾರ್ತೆ

ಕುರ್‌ಆನ್, ಗೀತಾ, ಬೈಬಲ್ ಮುಂತಾದ ಪವಿತ್ರ ಧಾರ್ಮಿಕ ಗ್ರಂಥಗಳು ಕೌಟುಂಬಿಕ ಜೀವನಕ್ಕೆ ದಾರಿದೀಪವಾಗಿವೆ. ದಾಂಪತ್ಯಕ್ಕೆ ಕಾಲಿಡುವ ವಧೂ-ವರರು ತಂತಮ್ಮ ಧಾರ್ಮಿಕ ಪವಿತ್ರ ಗ್ರಂಥಗಳನ್ನು ತಿಳಿದುಕೊಂಡರೆ ಅವರ ಜೀವನ ಮಾರ್ಗ ಅನುಕರಣೀಯವಾಗುವುದು ಎಂದು ಹರಪನ್ನಹಳ್ಳಿಯ ಅಂಜುಮನ್-ಎ-ಇಸ್ಲಾಮ್ ಮುಸ್ಲಿಮೀನ್ ಸಂಸ್ಥೆಯ ಎನ್.ಎಮ್. ನೂರ್‌ಹ್ಮದ್ ಹೇಳಿದರು.

ಸಾಹಿತಿ ಜಿ.ಎಂ.ಶಿರಹಟ್ಟಿ ಅವರ “ಕಾಬಾದ ನೆರಳಿನಲ್ಲಿ” ಅವರ ಪುಸ್ತಕ ಬಿಡುಗಡೆ ಮಾಡುತ್ತಾ ಮಾತಾಡಿದರು. ಅಬ್ದುಲ್ ಸಾಲೆಹ್ ಅವರ ಪುತ್ರ ಡಿ.ನಯಾಝ್ ಹಾಗೂ ಅಹ್ಮದ್‌ಸಾಬ್ ಅವರ ಪುತ್ರಿ ಸಲೀಮಾ ಅವರ ವಿವಾಹದ ಸಮಾರಂಭದಲ್ಲಿ ಈ ಪುಸ್ತಕ ಬಿಡುಗಡೆ ನಡೆಯಿತು.

ವಿವಾಹದ ವಿಧಿ ವಿಧಾನಗಳನ್ನು ನೆರವೇರಿಸಿದ ಜಾಮಿಯಾ ಮಸ್ಜಿದ್ ರಾಜಾ ಮುಫ್ತಿ ಅವರು ಇಂಥ ಸಂದರ್ಭದಲ್ಲಿ ಕುರ್‌ಆನಿನ ತಿಳುವಳಿಕೆಯ ಗ್ರಂಥ ಲೋಕಾರ್ಪಣೆಯಾಗುತ್ತಿರುವುದು ಸಂತಸ ತಂದಿದೆ ಎಂದರು.

ಲೋಕಾರ್ಪಣೆಯ ಸಂದರ್ಭದಲ್ಲಿ ಹಾಜರಿದ್ದ ಇಮ್ತಿಯಾಝ್ ಮೌಲಾನಾ, ದಾದಾಪೀರ ಮೌಲಾನಾ, ಗುಲಾಮ್ ರಬ್ಬಾನಿ ಮೌಲಾನಾ, ಹಾಫಿಜ್ ಹೈದರ ಮೌಲಾನಾ ಮುಂತಾದ ಧಾರ್ಮಿಕ ಮುಖಂಡರೊಂದಿಗೆ ಮಾಜಿ ಪುರಸಭಾ ಅಧ್ಯಕ್ಷ ಎಚ್.ವಸಂತಪ್ಪ, ರಾಜಣ್ಣ, ಡಿ.ಮೋತಿ ನಾಯಕ, ಹಾಲೇಶ, ರಾಜಕೀಯ ಮುಖಂಡರಾದ ಗೌಸ, ಶಿಕ್ಷಕಿಯರಾದ ಬಶೀರಾ, ಆಶಾ ಪರ್ವಿನ, ಹಾಶಮಾ ರಫೀಕ್, ಮುಬೀನಾ, ಸಾಹಿರಾ ಮೆಹಬೂಬ ಮುಂತಾದ ಅನೇಕ ಹಿರಿಯರು ಮಾತನಾಡಿ ಪವಿತ್ರ ಧಾರ್ಮಿಕ ಗ್ರಂಥಗಳ ಅಭ್ಯಾಸಕ್ಕೆ ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಗ್ರಂಥದ ಲೇಖಕರಾದ ಜಿ.ಎಂ.ಶಿರಹಟ್ಟಿ ಅವರನ್ನು ಸತ್ಕರಿಸಲಾಯಿತು.