ಗಡಿದಾಟಿದ ಪಾಕಿಸ್ತಾನಿ ಮಹಿಳೆಯ ಹತ್ಯೆ: ಭಯೋತ್ಪಾದಕಿ ಎಂದ ಭಾರತ, ಮಾನಸಿಕ ಅಸ್ವಸ್ಥೆ ಎಂದ ಪಾಕ್

0
1901

ಅಮೃತಸರ: 22 ವರ್ಷ ವಯಸ್ಸಿನ ಪಾಕಿಸ್ತಾನಿ ಮಹಿಳೆಗೆ ಭಾರತದ ಗಡಿಭದ್ರತಾ ದಳ ಗುಂಡು ಹಾರಿಸಿದ್ದು ಮಹಿಳೆ ಅಮೃತಸರದ ಆಸ್ಪತ್ರೆಯಲ್ಲಿ ನಿಧನರಾದರು. ಪಾಕಿಸ್ತಾನದ ಮಾಧ್ಯಮಗಳಲ್ಲಿ ವರದಿಯಾದ ಪ್ರಕಾರ ನರ್‍ವಾಲ್ ಎಂಬಲ್ಲಿನ ಗುಲ್ಶನ್ ಬೀಬಿ ಎಂಬ ಮಾನಸಿಕ ಅಸ್ವಸ್ಥ ಮಹಿಳೆ ತಪ್ಪಾಗಿ ಪಾಕ್ ಗಡಿ ದಾಟಿ ಭಾರತದ ಸರಹದ್ದಿಗೆ ಪ್ರವೇಶಿಸಿದಾಗ ಭಾರತದ ಗಡಿಭದ್ರತಾ ಪಡೆ ಆಕೆಯ ಮೇಲೆ ಗುಂಡು ಹಾರಿಸಿದೆ ಎಂದು ಪಾಕಿಸ್ತಾನ ಹೇಳಿದ್ದರೆ ಭಾರತ ಮಹಿಳೆಯನ್ನು ಭಯೋತ್ಪಾದಕಿ ಎಂದಿದೆ.

ಮಹಿಳೆ ಸಂಪೂರ್ಣ ಆರೋಗ್ಯದಿಂದಿರುವವಳಾಗಿದ್ದು ಅವಳ ವಯಸ್ಸು ನಲ್ವತ್ತು ವರ್ಷದ ಮಧ್ಯದಲ್ಲಿದೆ ಎಂದು ಸೇನೆ ತಿಳಿಸಿರುವುದಾಗಿ ಭಾರತೀಯ ಮಾಧ್ಯಮಗಳು ವರದಿ ಮಾಡಿವೆ.

ಗಡಿ ಭದ್ರತಾ ದಳ ಗಂಭೀರ ಗಾಯಗೊಂಡಿದ್ದ ಮಹಿಳೆಯನ್ನು ಗುರುನಾನಕ್ ಸಿವಿಲ್‍ ಆಸ್ಪತ್ರೆಗೆ ದಾಖಲಿಸಿತ್ತು. ಮಹಿಳೆಯ ಮೃತದೇಹವನ್ನು ಊರಿಗೆ ತಂದು ಶವಸಂಸ್ಕಾರ ನಡೆಸಲು ಸಹಾಯ ಮಾಡಬೇಕೆಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್‍ಖಾನ್‍ರಿಗೆ ಮಹಿಳೆಯ ಕುಟುಂಬ ಮನವಿ ಮಾಡಿದೆ. ಮಹಿಳೆ ತನ್ನ ಮನೆಗೆ ಮೂರು ದಿವಸಗಳ ಬಳಿಕ ಮರಳುತ್ತಿದ್ದು ಚೆಕ್‍ಪೋಸ್ಟ್ ಸಮೀಪ ಆಕೆ ಗಡಿದಾಟಿದ್ದರು ಎಂದು ಮಹಿಳೆಯ ಪತಿ ಹೇಳಿದ್ದಾರೆ. ಕಾಶ್ಮೀರದ ಪುಲ್ವಾಮದಲ್ಲಿ 44 ಮಂದಿ ಯೋಧರು ವೀರಮೃತ್ಯುವಪ್ಪಿದ ಬಳಿಕ ಉಭಯ ದೇಶಗಳ ನಡುವೆ ಉದ್ವಿಗ್ನತೆ ನೆಲೆಯೂರಿದ್ದು ಪಾಕಿಸ್ತಾನ ದ ವಿರುದ್ಧ ಭಾರತ ಆರೋಪ ಹೊರಿಸಿದೆ. ಪಾಕಿಸ್ತಾನ ಸರಕಾರ ಆರೋಪ ತಿರಸ್ಕರಿಸಿದ್ದು ದಾಖಲೆಗಳನ್ನ ಕೊಡಿ ಎಂದು ಹೇಳಿದೆ.