ಸನ್ಮಾರ್ಗ ವಾರ್ತೆ
ಶಬ್ದ ಮಾಲಿನ್ಯ ಮುಕ್ತ ಗಣೇಶ ಹಬ್ಬದ ಆಚರಣೆಗೆ ಕರೆಕೊಟ್ಟ ವ್ಯಕ್ತಿಯನ್ನು ಪುಣೆಯಲ್ಲಿ ನಡೆದ ಗಣೇಶ ಹಬ್ಬದ ಸಿದ್ಧತೆಯ ಸಭೆಯಿಂದ ಹೊರಗೆ ಕಳುಹಿಸಲಾಗಿದೆ. ಮುಂಬರುವ ಗಣೇಶ ಹಬ್ಬದ ಸಿದ್ಧತೆಗಳನ್ನು ಪರಿಶೀಲಿಸಲು ಪುಣೆ ಪುರಸಭೆ ಆಯುಕ್ತರ ಕಚೇರಿಯಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಈ ಘಟನೆ ನಡೆದಿದೆ. ಶಬ್ದ ಮಾಲಿನ್ಯದ ವಿರುದ್ಧ ಬಲವಾಗಿ ಪ್ರತಿಪಾದಿಸುವ ಸಾಮಾಜಿಕ ಕಾರ್ಯಕರ್ತ ವಿದ್ಯಾನಂದ ಬಾಪಟ್ಟು ಕೂಡ ಈ ಸಭೆಯಲ್ಲಿ ಇದ್ದರು.
ಶಬ್ದ ಮಾಲಿನ್ಯವನ್ನು ಕಡಿಮೆ ಮಾಡುವುದಕ್ಕಾಗಿ ಈ ವರ್ಷದ ಗಣೇಶ ಹಬ್ಬವನ್ನು ಡಿಜೆಗಳಿಲ್ಲದೆ ಆಚರಿಸಬೇಕು ಎಂದು ಬಾಪಟ್ ಸಭೆಯಲ್ಲಿ ಸೂಚಿಸಿದರು
ಅವರ ಪ್ರಸ್ತಾಪಕ್ಕೆ ಗಣೇಶ ಮಂಡಲದ ಕೆಲವು ಪ್ರತಿನಿಧಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ರು. ಈ ಸಂದರ್ಭದಲ್ಲಿ ಮಾತಿಗೆ ಮಾತು ನಡೆಯಿತು. ಕೊನೆಗೆ ಅವರನ್ನು ಸಭೆಯಿಂದ ಹೊರಹೋಗುವಂತೆ ಕೇಳಿಕೊಳ್ಳಲಾಯಿತು. ಅವರು ಸಭೆಯಿಂದ ಹೊರ ನಡೆದರು.
ತಾನಿರುವ ನಗರದ ಹಳೆಯ ಮತ್ತು ಜನನಿ ಬಿಡ ನೆರೆಹೊರೆಗಳಲ್ಲಿ ಒಂದಾದ ನಾರಾಯಣ ಪೇತನಂತಹ ಪ್ರದೇಶಗಳು ಹತ್ತು ದಿನಗಳ ಗಣೇಶ ಹಬ್ಬದ ಸಮಯದಲ್ಲಿ ಸಾಕಷ್ಟು ಅಡಚಣೆಯನ್ನು ಅನುಭವಿಸುತ್ತಿವೆ ಎಂದು ಅವರು ಹೇಳಿದರು.












