ವ್ಯಾಕ್ಸಿನ್ ತೆಗೆದುಕೊಂಡ ಕೆಲವೇ ದಿನಗಳಲ್ಲಿ ಗುಜರಾತ್ ಸಚಿವರಿಗೆ ಕೊರೋನ

0
773

ಸನ್ಮಾರ್ಗ ವಾರ್ತೆ

ಅಹ್ಮದಾಬಾದ್: ಕೆಲವು ದಿನಗಳ ಹಿಂದೆ ಕೊರೋನ ಪ್ರತಿರೋಧಕ ವ್ಯಾಕ್ಸಿನನ್ನು ಗುಜರಾತ್ ಸಚಿವ ಈಶ್ವರ್‍ಸಿನ್ ಪಟೇಲ್ ತೆಗೆದುಕೊಂಡಿದ್ದರು. ಈದೀಗ ಅವರಿಗೆ ಕೊರೋನ ಸೋಂಕು ತಗುಲಿರುವುದು ದೃಢಪಟ್ಟಿದೆ. ಮಾರ್ಚ್ 13 ಶನಿವಾರದಂದು ಸಚಿವರಿಗೆ ಕೊರೋನ ವ್ಯಾಕ್ಸಿನ್ ಕೊಡಲಾಗಿತ್ತು. ಕೊರೋನ ದೃಢಪಟ್ಟಿದೆ ಆದರೆ ತನಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಇಲ್ಲ ಎಂದು ಸಚಿವರು ಟ್ವೀಟ್ ಮಾಡಿದ್ದಾರೆ.

ಗುಜರಾತಿನಲ್ಲಿ ನಿನ್ನೆ 890 ಮಂದಿಗೆ ಕೊರೋನ ದೃಢಪಟ್ಟಿದ್ದು ಇದರೊಂದಿಗೆ ಅಲ್ಲಿ ಕೊರೋನ ಪೀಡಿತರ ಸಂಖ್ಯೆ 2,79,097 ಕ್ಕೇರಿದೆ.ಇದೇ ವೇಳೆ, 24 ಗಂಟೆಗಳಲ್ಲಿ ದೇಶದಲ್ಲಿ 24,492 ಮಂದಿಗೆ ಕೊರೋನ ದೃಢಪಟ್ಟಿದೆ. 131ಮಂದಿ ಮೃತಪಟ್ಟಿದ್ದಾರೆ.