ಅತಿ ಹೆಚ್ಚು ಮಾಂಸಾಹಾರ ಸೇವನೆಯಲ್ಲಿ ಅಮೆರಿಕ ಪ್ರಥಮ, ಕುವೈಟ್‍ ದ್ವಿತೀಯ ಸ್ಥಾನ- ಅತೀ ಕಡಿಮೆ ಮಾಂಸ ಸೇವನೆಯಲ್ಲಿ ಬಾಂಗ್ಲಾದೇಶ ಪ್ರಥಮ, ಭಾರತ ದ್ವಿತೀಯ

0
2510

ಕುವೈಟ್ ಸಿಟಿ,ಆ.15: ಜಗತ್ತಿನಲ್ಲಿ ಅತೀಹೆಚ್ಚು ಮಾಂಸ ತಿನ್ನುವವರಲ್ಲಿ ಕುವೈಟ್ ಎರಡನೆ ಸ್ಥಾನದಲ್ಲಿದೆ ಎಂದು ಡೈಲಿ ಟೆಲಿಗ್ರಾಫ್ ನಡೆಸಿದ ಅಧ್ಯಯನದಲ್ಲಿ ತಿಳಿದು ಬಂದಿದೆ. ಅತಿಹೆಚ್ಚು ಮಾಂಸ ತಿನ್ನುವುದು ಅಮೆರಿಕದಲ್ಲಿ. ಹಿತಮಿತ ಜೀವನ ಮಟ್ಟವನ್ನು ಹೊಂದಿರುವ ಏಷ್ಯ, ಆಫ್ರಿಕಗಳಲ್ಲಿ ಮಾಂಸ ಬಳಕೆ ಕಡಿಮೆಯಿದೆ.

ವಿಶ್ವಸಂಸ್ಥೆಯ ಫುಡ್ ಆಂಡ್ ಅಗ್ರಿಕಲ್ಚರ್ ಆರ್ಗನೈಝೇಶನ್‍ನ ಲೆಕ್ಕ ಪ್ರಕಾರ ಪ್ರತೀವರ್ಷ ಒಬ್ಬ ವ್ಯಕ್ತಿ ನಾಲ್ಕು ಕೆಜಿಗಿಂತ ಕಡಿಮೆ ಮಾಂಸ ಬಳಸುವ ಏಕೈಕ ದೇಶ ಬಾಂಗ್ಲಾದೇಶ. ಸರಾಸರಿ ಅತಿಕಡಿಮೆ ಮಾಂಸ ತಿನ್ನುವ ಎರಡನೆ ದೇಶ ಭಾರತವಾಗಿದೆ. ಹೆಚ್ಚು ಮಾಂಸ ತಿನ್ನುವ ದೇಶಗಳಲ್ಲಿ ಅಮೆರಿಕ, ಕುವೈಟ್, ಆಸ್ಟ್ರೇಲಿಯ, ಬಹಮಾಸ್. ಲಕ್ಷಂಬರ್ಗ್, ನ್ಯೂಝಿಲೆಂಡ್, ಆಸ್ಟ್ರೀಯ, ಫ್ರಾನ್ಸ್, ಬರ್ಮುಡ ಸೇರಿವೆ. ಅತಿ ಕಡಿಮೆ ಮಾಂಸ ತಿನ್ನುವ ಪಟ್ಟಿಯಲ್ಲಿ ಬಾಂಗ್ಲಾದೇಶ ಪ್ರಥಮ ಸ್ಥಾನದಲ್ಲಿದ್ದು; ಭಾರತ, ಬುರುಂಡಿ, ಶ್ರೀಲಂಕಾ, ರುವಾಂಡ ಸಿಯರಲಿಯೊನ್, ಎರಿಟ್ರಿಯ, ಮೊಝಂಬಿಕ್ , ಗಾಂಬಿಯ ಮಲಾವಿ ನಂತರದ ಸ್ಥಾನವನ್ನು ಹೊಂದಿದೆ.